
ಬ್ರಹ್ಮಗಿರಿ ಸಾಯಿ ರಾಧಾ ಪ್ರೈಡ್ ಅಸೋಸಿಯೇಷನ್ ಅಧ್ಯಕ್ಷರಾಗಿ ದಿನಕರ್ ಅಮೀನ್ ಆಯ್ಕೆ
28/08/2025 10:06 AM
ಉಡುಪಿಯ 441 ಫ್ಲಾಟ್ ಗಳ ಅತೀದೊಡ್ಡ ಬಹು ಅಂತಸ್ತಿನ ಗೃಹ ಸಂಕೀರ್ಣ ಬ್ರಹ್ಮಗಿರಿ ಸಾಯಿ ರಾಧಾ ಪ್ರೈಡ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ದಿನಕರ್ ಅಮೀನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪುರುಷೋತ್ತಮ್ ಮಲ್ಪೆ ಹಾಗೂ ಸುಮನ್ ಬರ್ಬೋಜ, ಕಾರ್ಯದರ್ಶಿಯಾಗಿ ರವಿರಾಜ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಎಂ. ಇಕ್ಬಾಲ್ ಮನ್ನಾ, ಖಜಾಂಚಿಯಾಗಿ ಶರ್ಮಿಳಾ ರೊನಾಲ್ಡ್, ಜೊತೆ ಕೋಶಾಧಿಕಾರಿಯಾಗಿ ಮಕ್ರೀನಾ ಮಚಾದೊ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೇಷ್ಮಾ ವಿಶ್ವನಾಥ್, ಶ್ವೇತಾ ಕೆ. ಶೆಟ್ಟಿ, ತೃಪ್ತಿ ಅವಿನಾಶ್, ಎಂ. ಸುಧಾಕರ ಶೆಟ್ಟಿ, ಯು. ಎಸ್. ರವಿರಾಜ್, ಎಂ. ಗೋಪಾಲಕೃಷ್ಣ ರಾವ್, ಅನಿಲ್ ಜಿ. ಪ್ರಭು, ಲಿನೆಟ್ ಮೆನೆಜಸ್, ಹರಿಣಿ ಆರ್. ಶೆಟ್ಟಿ, ಪ್ರಕಾಶ್ಚಂದ್ರ ಹೆಗ್ಡೆ, ವಿಶಾಲಾ ಹೆಗ್ಡೆ, ನವ್ಯ ಪೂಂಜಾ ,ಡೋಲ್ಫಿ ಡಿ'ಮೆಲ್ಲೊ ಹಾಗೂ ರೋಹಿತ್ ಕುಮಾರ್ ಶೆಟ್ಟಿ ಚುನಾಯಿತರಾಗಿದ್ದಾರೆ.