
ಉಡುಪಿ:ಬಿಜೆಪಿ ಮತ್ತು ಜೆಡಿಎಸ್ ನವರು ಧರ್ಮದ ಮೇಲೆ,ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ- ಡಿಕೆಶಿ
ಉಡುಪಿ: ಧರ್ಮಸ್ಥಳದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮಾವೇಶ ಮಾಡುತ್ತಿರುವ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಜೆಡಿಎಸ್ ಮತ್ತು ಬಿಜೆಪಿಗೆ ಬೇರೆ ವೃತ್ತಿ ಇಲ್ಲ.ಎರಡೂ ಪಕ್ಷಗಳು ಬದುಕಿನ ಬಗ್ಗೆ ನೋಡಲ್ಲ. ಅವರು ಧರ್ಮ ಮತ್ತು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ಹೇಳಿದ್ದಾರೆ.ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಡಿಕೆಶಿ , ಮೈಸೂರು ದಸರಾ- ರಾಜಮಾತೆ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳ 64ನೇ ಜನ್ಮ ನಕ್ಷತ್ರ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಕೃಷ್ಣ, ಗಣಪತಿ ಮತ್ತು ನಿಮ್ಮ ಮಾದ್ಯಮದವರ ಆಶೀರ್ವಾದ ಬೇಕು.ಎಲ್ಲರ ಆಶೀರ್ವಾದ ಬೇಕಲ್ವಾ? ಎಂದು ಹೇಳಿದರು. ಇದು ನನ್ನ ರುಟೀನ್ ಪದ್ಧತಿ. ಕೃಷ್ಣಮಠದಿಂದ ಈ ಹಿಂದೆಯೇ ಆಹ್ವಾನ ಇತ್ತು.ಬಹಳ ವರ್ಷದಿಂದ ಈ ಸರ್ಕಾರ ಬಂದಮೇಲೆ ಆಹ್ವಾನ ಮಾಡುತ್ತಿದ್ದರು. ಕೃಷ್ಣಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ, ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದೇನೆ ಎಂದಷ್ಟೇ ಹೇಳಿ ಮಠಕ್ಕೆ ತೆರಳಿದರು.
ಡಿ.ಕೆ ಶಿವಕುಮಾರ್ , ಉಪಮುಖ್ಯಮಂತ್ರಿ