
ಕೊಲ್ಲೂರಿನ ಸೌಪರ್ಣಿಕಾ ನದಿ ಬಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆಯ ಮೃತದೇಹ ಪತ್ತೆ
30/08/2025 12:41 PM
ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕಾ ನದಿ ಬಳಿ ಕಣ್ಮರೆಯಾಗಿದ್ದ ಬೆಂಗಳೂರು ಮೂಲದ ಮಹಿಳೆಯ ಮೃತದೇಹ ಇಂದು ಪತ್ತೆಯಾಗಿದೆ.ಬೆಂಗಳೂರಿನ ವಸುಧಾ(46) ಮೃತ ಮಹಿಳೆ. ಇವರು ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿದ್ದು,ಅಲ್ಲೇ ಕಾರು ನಿಲ್ಲಿಸಿ ಸೌರ್ಪಣಿಕ ನದಿ ಬಳಿ ನಾಪತ್ತೆಯಾಗಿದ್ದರು.ಇವರು ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿತ್ತು. ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ನಿನ್ನೆಯಿಂದ ತೀವ್ರ ಹುಡುಕಾಟ ನಡೆಸುತ್ತು.ಇದೀಗ ಮಹಿಳೆಯ ಮೃತದೇಹ ಕೊಲ್ಲೂರು ದೇವಸ್ಥಾನದಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿ ಪತ್ತೆಯಾಗಿದೆ.