
ಮಲ್ಲಾರು: ಬಿ. ಜೆ.ಎಂ ಮಲ್ಲಾರು-ಮಜೂರು ಕಾರ್ಯಕ್ರಮದ ಕರಪತ್ರ ಬಿಡುಗಡೆ
ಮಲ್ಲಾರು:ಬದ್ರಿಯಾ ಜುಮ್ಮಾ ಮಸ್ಜಿದ್ (ರಿ) ಮಲ್ಲಾರು-ಮಜೂರು ವತಿಯಿಂದ ಆಗಸ್ಟ್ 23 ಹಾಫಿಲ್ ಸಿರಾಜುದ್ದಿನ್ ಖಾಸಿಮಿ ಪ್ರಭಾಷಣ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದುವಾ ಕಾರ್ಯಕ್ರಮ ಬಿಜೆಎಂ ಧರ್ಮ ಗುರುಗಳಾದ ಎಂ.ಕೆ ಅಬ್ದುರಶೀದ್ ಸಖಾಫಿ ಅಲ್ ಖಾಮಿಲ್ ನಡೆಸಿದರು.ಈ ಸಂದರ್ಭದಲ್ಲಿ ಬಿ.ಜೆ.ಎಂ ಮಸ್ಜಿದ್ ಅಧ್ಯಕ್ಷರಾದ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಮಾತನಾಡಿ ಅಂತರಾಷ್ಟೀಯ ಖ್ಯಾತಿಯ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪ್ರಭಾಷಣ ಹಾಗೂ ಸ್ವಲಾತ್ ನೇತೃತ್ವ ವಹಿಸಿದ ಸಯ್ಯದ್ ಸಾದಾತ್ ತಂಗಳ ಕಾರ್ಯಕ್ರಮಕ್ಕೆ ಜಮಾತಿಗರ ಸಹಕಾರ ಕೋರಿದರು .
ಬಿ.ಜೆ.ಎಂ ಅಭಿವೃದ್ಧಿ ಅಧ್ಯಕ್ಷರಾದ ಶರ್ಫುದ್ದೀನ್ ಶೇಕ್, ಬಿ.ಜೆ.ಎಂ ಪ್ರದಾನ ಕಾರ್ಯದರ್ಶಿ ಅಶ್ರಫ್ ಮೂಸ ,ಉಪಾಧ್ಯಕ್ಷರಾದ ಹಸನಬ್ಬ ಮಜೂರು,ಕಾರ್ಯದರ್ಶಿಗಳಾದ ರಜಬ್ ಕರಂದಾಡಿ,ಅಶ್ರಫ್ ಕರಂದಾಡಿ ರಝಕ್ ಮಲ್ಲಾರು ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಪಾದೂರು ಹಾಗೂ ಜಮಾತ್ ಸಮಿತಿ ಸದಸ್ಯರುಗಳು,ಉಸ್ತಾದರುಗಳು,ಬಿ.ಜೆ.ಎಂ ಅಂಗಸಂಸ್ಥೆಗಳಾದ ತಕ್ವೀಯತುಲ್ ಯಂಗ್ಮೆನ್ಸ್ ಸದಸ್ಯರುಗಳು, ಸಿರಾಜುಲ್ ಹುದಾ ದಫ್ ಸಮಿತಿ ಸದಸ್ಯರುಗಳು ಸ್ವಲಾತ್ ಸಮಿತಿ ಕೊಂಬಗುಡ್ಡೆ ಸದಸ್ಯರುಗಳು ಜಮಾತ್ ಬಾಂದವರು ಉಪಸ್ಥಿತರಿದ್ದರು.