
ಉಡುಪಿ: ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕೈಮಗ್ಗದ ಸೀರೆ ಉಟ್ಟು ಸಾಂಪ್ರದಾಯಿಕ ಸೌಂದರ್ಯ ಸ್ಪರ್ಧೆ
06/08/2025 04:49 AM
ಉಡುಪಿ: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ, ಜಿಲ್ಲಾ ಬಿಜೆಪಿ ನೇಕಾರರ ಪ್ರಕೋಷ್ಠ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಇವರ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ 2025ರ ಅಂಗವಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ಹಾಗೂ ಅಪೂರ್ವ ಕಲಾಕೌಶಲ್ಯ ಕೈಮಗ್ಗದ ನೇಕಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕೈಮಗ್ಗದ ಸೀರೆಗಳನ್ನು ಉಟ್ಟು ಸೌಂದರ್ಯ ಸ್ಪರ್ಧೆಯು ಅಗಸ್ಟ್ 7, 2025ರಂದು ಬೆಳಿಗ್ಗೆ 10.30 ರಿಂದ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದೆ.
ಸ್ಪರ್ಧೆಯು ಒಂದೇ ವಿಭಾಗದಲ್ಲಿ ಜರುಗಲಿದ್ದು, ಮಹಿಳೆಯರು ಸಾಂಪ್ರದಾಯಿಕ ಶೈಲಿಯಲ್ಲಿ, ಕೈಮಗ್ಗದ ಸೀರೆಗಳನ್ನು ಉಟ್ಟು ಸುಶೋಭಿತೆಯರಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಆಕರ್ಷಕ ಬಹುಮಾನಗಳಿವೆ. ಹೆಚ್ಚಿನ ವಿವರಗಳಿಗೆ ಮತ್ತು ಹೆಸರು ನೋಂದಾಯಿಸಲು 9481289685, 9481145731, 9481017756 ಸಂಪರ್ಕಿಸಬಹುದು.