ಮಣಿಪಾಲ: ಹೃದಯಾಘಾತದಿಂದ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟಿ ಟಿ ವಾಹನದ ಚಾಲಕ‌ ಸಾವು !

ಮಣಿಪಾಲ: ಹೃದಯಾಘಾತದಿಂದ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟಿ ಟಿ ವಾಹನದ ಚಾಲಕ‌ ಸಾವು !

 


‌‌‌‌‌ಮಣಿಪಾಲ: ಪ್ರಗತಿನಗರದ ಕೇಂದ್ರೀಯ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.‌

ವಿದ್ಯಾರ್ಥಿಗಳನ್ನು ಶಾಲೆಗೆ ಸಾಗಿಸುತ್ತಿರುವಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ, ಮಾರುಥಿ ವೀಥಿಕಾದಲ್ಲಿ ನಡೆದು ಸಾಗುತ್ತಿದ್ದ ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರನ್ನು ಕಂಡು, ವಾಹನ ನಿಲ್ಲಿಸಿದ ಚಾಲಕ, ಎದೆ‌ನೋವಿನ ವಿಚಾರವನ್ನು ಒಳಕಾಡು ಅವರಲ್ಲಿ ಹೇಳಿಕೊಂಡಿದ್ದಾನೆ. ತಕ್ಷಣ ಒಳಕಾಡು ಅಂಬುಲೆನ್ಸ್ ವಾಹನದಲ್ಲಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರಿಂದ ಚಾಲಕ ಮೃತಪಟ್ಟಿರುವುದು ತಿಳಿದುಬಂದಿತು. ಮೃತ ಚಾಲಕ  ಕಾರ್ಕಳ ನೀರೆ ಬೈಲೂರಿನ ಮೊಯ್ದಿನ್ ಬಾವ (65) ಎಂದು ತಿಳಿದುಬಂದಿದೆ.‌ವಿದ್ಯಾರ್ಥಿಗಳಿರುವ ಶಾಲಾವಾಹನ‌ ಚಾಲನೆಯಲ್ಲಿದ್ದಾಗ ಚಾಲಕ‌ ಮೃತಪಟ್ಟಲ್ಲಿ ದೊಡ್ಡಮಟ್ಟದ ಅವಘಡ ಸಂಭವಿಸುವುದರಲ್ಲಿತ್ತು.ಅದೃಷ್ಟವಶಾತ್ ಸಂಭವನೀಯ ದುರಂತವು ತಪ್ಪಿದಂತಾಗಿದೆ.

Ads on article

Advertise in articles 1

advertising articles 2

Advertise under the article