
ಗುಜರಾತ್ : 3 ತಿಂಗಳ ಕಾಲ ವೃದ್ಧೆಯ ಡಿಜಿಟಲ್ ಅರೆಸ್ಟ್ ಮಾಡಿ 19 ಕೋಟಿ ರೂ. ವಂಚನೆ!
01/08/2025 08:46 AM
ಅಹ್ಮದಾಬಾದ್: ಗುಜರಾತ್‌ನ ಹಿರಿಯ ವೈದ್ಯೆಯೊಬ್ಬರನ್ನು 3 ತಿಂಗಳಿಗೂ ಹೆಚ್ಚು ಕಾಲ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ್ದ ಸೈಬರ್ ವಂಚಕರು, ಆಕೆಗೆ ಸಾಲ ಪಡೆದುಕೊಳ್ಳುವಂತೆ, ಸ್ಥಿರ ಠೇವಣಿಗಳನ್ನು ವಾಪಸು ಪಡೆಯುವಂತೆ ಮಾಡಿ ಬರೋಬ್ಬರಿ 19 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ವೃದ್ಧೆಯ ಮೊಬೈಲ್‌ಗೆ ಬೇರೆ ಬೇರೆ ಸರ್ಕಾರಿ ಹುದ್ದೆ ಹೊಂದಿರುವ ಅಧಿಕಾರಿಗಳ ಹೆಸರಿನಲ್ಲಿ ವಂಚಕರ ತಂಡ ಕರೆ ಮಾಡಿ, ಆಕೆಯ ಮೊಬೈಲ್ ಸಂಖ್ಯೆ ಅನಧಿಕೃತ ಚಟುವಟಿಕೆಗಳಲ್ಲಿ ಬಳಕೆಯಾಗಿದೆ ಎಂದು ನಂಬಿಸಿ ವಂಚಿಸಿದ್ದಾರೆ. ಮೋಸ ಹೋಗಿರು ವುದು ತಿಳಿದುಬಂದಂತೆ ಪೊಲೀಸರ ಗಮನಕ್ಕೆ ತಂದಿದ್ದು, ವೃದ್ಧೆಯ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರನೊಬ್ಬನ ಬಂಧನವಾಗಿದೆ.