ಉಡುಪಿ: ಕುಂಜಾಲು ಜಂಕ್ಷನ್ ನಲ್ಲಿ ದನದ ತಲೆ ಪತ್ತೆಯಾಗಿಆರೋಪಿಗಳ ಬಂಧನವಾದ ಬಳಿಕವೂ ಈ ಪ್ರಕರಣವನ್ನು ಮುಸ್ಲಿಮರ ತಲೆಗೆ ಕಟ್ಟಲು ಸಂಘಪರಿವಾರ ಮತ್ತು ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಸ್ಡಿಪಿಐ ಆರೋಪಿಸಿದೆ.
ಉಡುಪಿಯಲ್ಲಿ ಮಾತನಾಡಿದ ಎಸ್ ಡಿ ಪಿ ಐ ರಾಜ್ಯ ಉಪಾಧ್ಯಕ್ಷ ರಿಯಾಝ್ ಕಡಂಬು ,ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಯಶ್ ಪಾಲ್ ಸುವರ್ಣ ಪ್ರಚೋದನಕಾರಿಯಾಗಿ ಮಾತನಾಡಿದ್ದರು.ಆರಂಭದಲ್ಲಿ ಪ್ರಕರಣವನ್ನು ಮುಸಲ್ಮಾನರ ತಲೆಗೆ ಕಟ್ಟಿದ್ದರು.ಆದರೆಪೊಲೀಸ್ ಇಲಾಖೆ ನೈಜ ಆರೋಪಿಗಳನ್ನು ಬಂಧಿಸಿದೆ.
ಶರಣ್ ಪಂಪ್ ವೆಲ್ ಆರೋಪಿಗಳ ಬಂಧನ ನಂತರ ಕೂಡ ಮುಸಲ್ಮಾನರ ಮೇಲೆ ಆರೋಪ ಮಾಡುತ್ತಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಯುತ್ತಿಲ್ಲ.ಹಾಗಾಗಿ ಅದನ್ನು ಮುಚ್ಚಿಹಾಕಲು ಸಂಘ ಪರಿವಾರ ಬಿಜೆಪಿ ಪ್ರಾಯೋಜಿತ- ಪೂರ್ವ ನಿಯೋಜಿತ ಕೃತ್ಯವಿದು.ದನದ ರುಂಡವನ್ನು ಹಾಕಿರುವುದು ಪೂರ್ವ ನಿಯೋಜಿತ ಎಂಬುದು ನಮ್ಮ ಸಂಶಯ.ಇದರ ಹಿಂದೆ ಇರುವವರನ್ನು ಪೊಲೀಸ್ ಇಲಾಖೆ ಕಂಡು ಹಿಡಿಯಬೇಕು.ಸುಮೊಟೋ ಕೇಸ್ ಹಾಕಿದರೆ ಸಾಲದು, ಶರಣ್ ಪಂಪ್ ವೆಲ್ ಅವರನ್ನು ಬಂಧಿಸಬೇಕು.ಯಶ್ ಪಾಲ್ ಸುವರ್ಣ ನಿರಂತರವಾಗಿ ಕೋಮು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ವಾತಾವರಣ ಬೇಕು .
ಶಾಂತಿ ಕದಡುವ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ರಿಯಾಝ್ ಒತ್ತಾಯ ಮಾಡಿದ್ದಾರೆ.
