ಉಡುಪಿ: ಸಮಾಜಸೇವೆಗಾಗಿ ನಿತ್ಯಾನಂದ ಒಳಕಾಡು ಅವರಿಗೆ ರಾಜ್ಯ ಪ್ರಶಸ್ತಿ


ಉಡುಪಿ: ಬೆಂಗಳೂರು ಆರ್ ಟಿ ನಗರದ ಸಮರ್ಥ ಸಾಹಿತ್ಯ‌ ಮತ್ತು ಸಾಂಸ್ಕ್ರತಿಕ  ಪ್ರತಿಷ್ಠಾನದ ಆಯೋಜನೆಯಲ್ಲಿ‌ ರಾಜ್ಯ ಎಲ್ಲಾ ಜಿಲ್ಲೆಗಳಿಂದ ಆಯ್ಕೆಗೊಳಗಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 38 ಸಾಧಕರಿಗೆ "ಹಳ್ಳೂರು ಹನುಮಂತಪ್ಪ ವರಮಹಾಲಕ್ಷ್ಮಮ್ಮ" ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವು ರವಿವಾರ ನಡೆಯಿತು. 

ಚಾಮರಾಜನಗರದ ಮಹಾಕವಿ ಕುವೆಂಪು ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ ಅನನ್ಯವಾದ  ಸಮಾಜಸೇವೆಗಾಗಿ ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೇಲಿಮಠ ಸಂಸ್ಥಾನದ ನಿ.ಪು.‌ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ಬಿ. ಶಿವಲಿಂಗೇಗೌಡ, ವಿಜಯವಾಣಿ ಸೀನಿಯರ್ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ, ಸಮಾಜಸೇವಕ ಡಾ.ಪಿ.ಎಚ್ ರಾಘವೇಂದ್ರ ಶೆಟ್ಟಿ,‌‌ತುಮಕೂರಿನ ವಿಶ್ರಾಂತ‌ ಪ್ರಾಂಶುಪಾಲ ಸುಬ್ರಮಣ್ಯ ಶೆಟ್ಟಿ‌ ಹಾಗೂ ಮೊದಲಾದವರು ಉಪಸ್ಥಿತರಿದ್ದರು.