ತೋನ್ಸೆ-ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಪ್ರತಿಭಾ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಿದ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಲ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಕನಸ್ಸುಗಳೊಂದಿಗೆ ಶ್ರಮವಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ, ವಿದ್ಯಾರ್ಥಿಗಳು ಈ ದೆಸೆಯಲ್ಲಿ ಮುನ್ನಡೆಯ ಬೇಕು.ಕಲಿಕೆಯೊಂದಿಗೆ ಉತ್ತಮ ನಡವಳಿಕೆ ಅಳವಡಿಸಿಕೊಂಡು ಸಮಾಜದಲ್ಲಿ ತನ್ನನ್ನು ಗುರುತಿಸುವ ರೀತಿಯಲ್ಲಿ ಬೆಳೆಯಬೇಕೆಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವ್ರದ್ಧಿ ಪ್ರಾಧಿಕಾರ ಅಧ್ಯಕ್ಷರಾದ ದಿನಕರ ಹೆರೂರು, ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಮೌಲಾನ ಆದಂ ಸಾಹೇಬ್, ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷರಾದ ಡಾ// ಶಾಹೆನವಾಜ್, ಉದ್ಯಮಿ ಶಿಕ್ಷಣ ಸಂಸ್ಥೆಯ ಹಿತೈಷಿ ಜನಾಬ್ ಅನ್ಸಾರ್ ಟಿ ಎಸ್, ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಅಕಾಡೆಮಿ ಮುಖ್ಯಸ್ಥರಾದ ಜನಾಬ್ ಹಸೀಬ್ ತರಫ್ದಾರ್, ಪ್ರಾಂಶುಪಾಲರಾದ ದಿವ್ಯ ಪೈ, ಮುಖ್ಯ ಶಿಕ್ಷಕಿ ಸುನಂದಾ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶೈಮಾ ನಾಝ್ ಪ್ರಾರ್ಥನೆಗೈದರು. ಕಾಲೇಜು ಪ್ರಾಂಶುಪಾಲೆ ದಿವ್ಯ ಪೈ ಸ್ವಾಗತಿಸಿದರು. ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಪ್ರಾಸ್ತಾವಿಕ ಮಾಡಿದರು. ವಿದ್ಯಾರ್ಥಿನಿ ಸಾರ ಮುಕ್ತಾರ್ ಧನ್ಯವಾದವಿತ್ತರು, ವಿದ್ಯಾರ್ಥಿನಿ ಆಯಿಶಾ ಮರ್ವ ಹಾಗೂ ಆಯಿಶಾ ಮನ್ಹ ಕಾರ್ಯಕ್ರಮ ನಿರೂಪಿಸಿದರು.
