ಉಡುಪಿ: ಜಿಲ್ಲೆಯಲ್ಲಿ ದಿಢೀರ್ ಸಾವಿನ ಪ್ರಕರಣ ವರದಿಯಾಗಿಲ್ಲ- ಯಾರೂ ಆತಂಕಪಡುವ ಅಗತ್ಯ ಇಲ್ಲ-ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್

 


ಉಡುಪಿ: ರಾಜ್ಯದಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಸರ್ಜನ್  ಡಾ ಹೆಚ್ ಆಶೋಕ್ ,ಉಡುಪಿ ಜಿಲ್ಲೆಯಲ್ಲಿ ಸದ್ಯ ಆತಂಕ ಛಾಯೆ ಇಲ್ಲ.ಜಿಲ್ಲೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯಲ್ಲೂ ಏರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏನಾದರೂ ಹೃದಯಾಘಾತದ ಲಕ್ಷಣಗಳಿದ್ದರೆ ಮಾತ್ರ ಇಸಿಜಿ ಮಾಡಿಸಲು ಹೇಳುತ್ತೇವೆ.40 ವಯಸ್ಸಿಗಿಂತ ಮೇಲ್ಪಟ್ಟವರು ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ.ಆರೋಗ್ಯಪೂರ್ಣವಾಗಿರಲು ಉತ್ತಮ ಆಹಾರ ಮತ್ತು ವ್ಯಾಯಾಮ ಅತಿಮುಖ್ಯ. ಪ್ರತಿಯೊಬ್ಬರೂ ಎಲ್ಲಾ ಸಮಯದಲ್ಲಿಯೂ ಆರೋಗ್ಯದ ಕಡೆ ಗಮನ ಹರಿಸಬೇಕು.ನಮ್ಮಲ್ಲಿ ಜನವರಿಯಿಂದ ಇಲ್ಲಿ ತನಕ ಹೃದಯ ಸಮಸ್ಯೆಯಿಂದ ಐದು ಜನ ಮಾತ್ರ ಸಾವನ್ನಪ್ಪಿದ್ದಾರೆ.ಮೊದಲೇ ಪರೀಕ್ಷೆಗೆ ಒಳಪಟ್ಟ, ಹೃದಯ ಖಾಯಿಲೆಗೆ ತುತ್ತಾದವರ ಸಾವಾಗಿದೆ. ಏಕಾಏಕಿ ಸಾವಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.‌‌‌