ಉಡುಪಿ: ಹೃದಯಾಘಾತ ಹೆಚ್ಚಳ ಹಿನ್ನೆಲೆ- ಜಿಲ್ಲೆಯಲ್ಲಿ ಅಂತಹ ಸಮಸ್ಯೆ ಇಲ್ಲ- ಹೃದಯ ಸಂಬಂಧಿ ಖಾಯಿಲೆ ಎದುರಿಸಲು ಸಕಲ ಸಿದ್ಧತೆ- ಜಿಲ್ಲಾ ವೈದ್ಯಾಧಿಕಾರಿ



ಉಡುಪಿ: ರಾಜ್ಯಾದ್ಯಂತ ಹೃದಯಾಘಾತಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಉಡುಪಿಯ ಜಿಲ್ಲಾ ವೈದ್ಯಾಧಿಕಾರಿ ಬಸವರಾಜ್ ಜಿ.ಹುಬ್ಬಳ್ಳಿ ಮಾಹಿತಿ ನೀಡಿದ್ದು ,ಜಿಲ್ಲೆಯಲ್ಲಿ ಹೃದಯ ಸಂಬಂಧಿ ಖಾಯಿಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.ಹೃದಯಾಘಾತಕ್ಕೆ ಮಾನಸಿಕ ಒತ್ತಡ ಪ್ರಮುಖ ಕಾರಣ ಎಂದಿರುವ ಅವರು ,ಇತರರೊಂದಿಗೆ ನಮ್ಮನ್ನು ಹೋಲಿಕೆ ಮಾಡುತ್ತಿದ್ದೇವೆ.

ಹೋಲಿಕೆಯಿಂದ ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತೇವೆ. ಹಣಗಳಿಸುವ ಭರದಲ್ಲಿ ಮಾನಸಿಕ‌ ನೆಮ್ಮದಿ ಕಳೆದುಕೊಳ್ಳಬೇಡಿ ಎಂದು ಸಲಹೆ ಮಾಡಿದ್ದಾರೆ. ನಮ್ಮ ದೈನಂದಿನ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡಬೇಕು ಎಂದಿರುವ ಅವರು,ಆಹಾರ ಪದ್ದತಿ ಜೊತೆಗೆ ವ್ಯಾಯಾಮವನ್ನು ಮಾಡಬೇಕು.ಅತಿಯಾದ ದೈಹಿಕ ಕಸರತ್ತು ಆಪತ್ತಿಗೆ ಕಾರಣವಾಗುತ್ತದೆ.ನಿಗದಿತ ಸಮಯದ ನಿದ್ರೆ ದೇಹಕ್ಕೆ ಅತೀ ಅವಶ್ಯಕ.ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಹೃದಯ ಸಂಬಂಧಿ ಖಾಯಿಲೆಯನ್ನು ಎದುರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರು ಕರ್ತವ್ಯದಲ್ಲಿದ್ದಾರೆ.ರೋಗಿಗಳ ತಪಾಸಣೆಗೆ ತಂತ್ರಜ್ಞಾನಗಳ ಕೊರತೆಯೂ ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.