ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ಬೆಳ್ಳಿ ಪ್ರದರ್ಶನ ಮತ್ತು ಮಾರಾಟ

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ಬೆಳ್ಳಿ ಪ್ರದರ್ಶನ ಮತ್ತು ಮಾರಾಟ

 

ಉಡುಪಿ : ವಿಶ್ವದ ಅತಿದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಹೆಸರಾಂತ ಶೋರೂಂನಲ್ಲಿ ಹೊಚ್ಚ ಹೊಸದಾದ ಬೆಳ್ಳಿಯ ಆಭರಣದ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಜುಲೈ 25 ರಿಂದ ಆಗೆಸ್ಟ್ 03 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರೆ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ.ಇದರ ಅನಾವರಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ  ಜ್ಯೋತಿ, ಶ್ರೀಮತಿ ರೂಪಕಲಾ ಕಿರಣ್ ಶೆಟ್ಟಿ ನೆರವೇರಿಸಿದರು,ಸಂದೀಪ್ ಸಫಲ್ಯ ಬೆಳ್ಳಿಯ ವೈವಿದ್ಯತೆ ಬಗ್ಗೆ ವಿವರಿಸಿದರು.

ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ,ಗುರುರಾಜ್ ಹಾಗೂ ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಚಿನ್ನ,ಜೇಮ್ಸ್ ಸ್ಟೋನ್  ಜುವೆಲ್ಲರಿ  ಖರೀದಿ ಮೇಲೆ ಶೆ.30 ರಷ್ಟು, ವಜ್ರಾಭರಣ ಖರೀದಿಗೆ ಶೆ.30 ರವರೆಗೆ ಕಡಿತ ಇದೆ ಎಂದು ಪ್ರಕಟಣೆಯಲ್ಲಿ ಮಾರುಕಟ್ಟೆ ಮುಖ್ಯಸ್ಥರಾದ ತಂಝೀಮ್ ಶಿರ್ವ ತಿಳಿಸಿದರು.ಕಾರ್ಯಕ್ರಮವನ್ನು ವಿಘ್ನೇಶ್ ನಿರೂಪಿಸಿ ನಿತ್ಯಾನಂದ್ ನಾಯಕ್  ವಂದಿಸಿದರು.

Ads on article

Advertise in articles 1

advertising articles 2

Advertise under the article