ಉಡುಪಿ:12 ನೇ ವಾರ್ಷಿಕೋತ್ಸವ ಪ್ರಯುಕ್ತ ಉಡುಪಿ ಮಲಬಾರ್ ಗೋಲ್ಡ್ ನಿಂದ ರಕ್ತದಾನ ಶಿಬಿರ , ರಕ್ತದಾನಿಗಳಿಗೆ ಸನ್ಮಾನ

ಉಡುಪಿ:12 ನೇ ವಾರ್ಷಿಕೋತ್ಸವ ಪ್ರಯುಕ್ತ ಉಡುಪಿ ಮಲಬಾರ್ ಗೋಲ್ಡ್ ನಿಂದ ರಕ್ತದಾನ ಶಿಬಿರ , ರಕ್ತದಾನಿಗಳಿಗೆ ಸನ್ಮಾನ

 


ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ೧೨ನೇ ವಾರ್ಷಿಕೋತ್ಸವ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರ  ಅಭಿನಂದನಾ ಕಾರ್ಯಕ್ರಮ ಗುರುವಾರ ನಡೆಯಿತು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಜಾತಿ, ಮತ, ಧರ್ಮವನ್ನು ಮೀರಿ  ಜೀವ ಉಳಿಸಲು ಅಗತ್ಯವಾದ ರಕ್ತ ಸೌಹಾರ್ದಕ್ಕೆ ಪೂರಕವಾಗಿದೆ. ಹಸಿವು ಮುಕ್ತ ಜಗತ್ತು ರೂಪಿಸುವ ಹಾದಿಯಲ್ಲಿ ಬಡವರಿಗೆ ನೆರವು ಸಹಿತ ಮಲಬಾರ್ ಗೋಲ್ಡ್ ಸಂಸ್ಥೆಯ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಹೇಳಿದರು.



ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ, ಸಂಸ್ಥೆಯ ಲಾಭಾಂಶದಲ್ಲಿ ಶೇ. ೫ ಮೊತ್ತವನ್ನು ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹೆಣ್ಮಕ್ಕಳಿಗೆ ವಿದ್ಯಾರ್ಥಿ ವೇತನ, ಹಸಿವು ಮುಕ್ತ ಜಗತ್ತು, ಅಜ್ಜಿ ಮನೆ, ಮೈಕ್ರೋ ಲರ್ನಿಂಗ್ ಸೆಂಟರ್ ಮೂಲಕ ದೇಶದಲ್ಲಿ ೨೮೨ ಕೋಟಿ ರೂ. ಹಾಗೂ ಕರ್ನಾಟಕದಲ್ಲಿ ೪೦.೮೮ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ನುಡಿದರು.  

ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತ ನಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ, ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸುರೇಂದ್ರ ಶೆಟ್ಟಿö, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕ್ಲಿ ಡಿಸೋಜಾ ಮಾತನಾಡಿದರು.

ದಿಶಾನ್ ಪೂಜಾರಿ, ಶಾಂತಾರಾಮ್ ಮೊಗವೀರ, ವಿನುತಾ ಕಿರಣ್, ಜಯರಾಜ್ ಸಾಲ್ಯಾನ್, ಅಬ್ದುಲ್ ಹಮೀದ್ ಉಚ್ಚಿಲ, ನಿತ್ಯಾನಂದ ಅಮೀನ್, ಚೇತು ಶಂಕರಪುರ, ಝಾಕಿರ್ ಹುಸೇನ್, ಶ್ರೀನಿವಸ ಪ್ರಸಾದ್ ಮಯ್ಯ ಅವರನ್ನು ಅತಿ ಹೆಚ್ಚು ರಕ್ತದಾನ ಮಾಡಿ ಸಮಾಜಕ್ಕೆ ನೀಡಿದ ಕೊಡುಗೆ, ಪ್ರೇರಣೆಗಾಗಿ ಅಭಿನಂದಿಸಲಾಯಿತು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು.

ಮಲಬಾರ್ ಗೋಲ್ಡ್ ಸಾಮಾಜಿಕ ಕಳಕಳಿ:

*೧೭ರಾಜ್ಯಗಳ ೯೫,೦೦೦ವಿದ್ಯಾರ್ಥಿನಿಯರಿಗೆ ೬೦ಕೋಟಿ ರೂ. ವಿದ್ಯಾರ್ಥಿ ವೇತನ

*೮೧ನಗರಗಳಲ್ಲಿ ನಿತ್ಯ ೬೦,೦೦೦ ಆಹಾರ ಕಿಟ್(ಈ ತನಕ ೧೮.೪೬ಮಿಲಿಯ ಕಿಟ್)

*೨೦೨೫,೨೬ರಲ್ಲಿ ೨೧ಲಕ್ಷ ವಿದ್ಯಾರ್ಥಿನಿಯರಿಗೆ ೧೬ಕೋಟಿ ರೂ. ವಿತರಣೆ ಗುರಿ

*ಹೈದರಾಬಾದ್, ಬೆಂಗಳೂರಿನಲ್ಲಿ ೧೪೦ಬೆಡ್ಡುಗಳ  ಸುಸಜ್ಜಿತ ಅಜ್ಜಿ ಮನೆ

*೧೨ರಾಜ್ಯಗಳಲ್ಲಿ ೯,೦೦೦ಮಕ್ಕಳು ಶಾಲೆಗೆ ಸೇರ್ಪಡೆ, ೫೮೧ಮೈಕ್ರೋ ಲರ್ನಿಂಗ್ ಸೆಂಟರ್ ಮೂಲಕ ೨೫,೮೦೦ಮಕ್ಕಳಿಗೆ  ನೆರವು

*೨೨,೩೫೦ಕುಟುಂಬಗಳಿಗೆ ೭೭ಕೋಟಿ ರೂ. ಮೌಲ್ಯದ ವೈದ್ಯಕೀಯ ನೆರವು

*೪,೮೨೮ಮಂದಿಯ ಗೃಹ ನಿರ್ಮಾಣಕ್ಕೆ ೧೪.೫೦ಕೋಟಿ ರೂ. ನೆರವು

*ಐದು ಲಕ್ಷ ಯುವತಿಯರ ಮದುವೆಗೆ ನೆರವು

*ರಾಜ್ಯದ ೧೨ಪ್ರದೇಶಗಳಲ್ಲಿ ೫,೩೫೦ಜನರಿಗೆ ಪ್ರತಿದಿನ ಒಂದು ಹೊತ್ತಿನ ಆಹಾರ ಕಿಟ್, ಉಡುಪಿಯಲ್ಲಿ ಪ್ರತಿದಿನ ೨೦೦ಕಿಟ್ ವಿತರಣೆ

Ads on article

Advertise in articles 1

advertising articles 2

Advertise under the article