
ಧರ್ಮಸ್ಥಳ: ಮೂರನೇ ದಿನವೂ ಮುಂದುವರೆದ ಮೃತದೇಹ ಪತ್ತೆಗಾಗಿ ಅಗೆಯುವ ಕಾರ್ಯ- ಅವಶೇಷಗಳು ಪತ್ತೆ
ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹ ಪತ್ತೆಗಾಗಿ ಜಾಗ ಅಗೆಯುವ ಕಾರ್ಯ ಸತತ ಮೂರನೇ ದಿನವೂ ಮುಂದುವರಿಯಿತು.ಇಂದು ಮೃತದೇಹದ ಅವಶೇಷಗಳು ಪತ್ತೆಯಾಗಿವೆ.ಎಸ್ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೆರಳಿದ್ದಾರೆ.
ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳಲ್ಲಿ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಐದು ಕಡೆ ಈಗಾಗಲೇ ನೆಲವನ್ನು ಅಗೆಯಲಾಗಿದೆ.ಆರನೇ ಸ್ಥಳದಲ್ಲಿ ಮೃತದೇಹಗಳ ಅವಶೇಷ ಪತ್ತೆಯಾಗಿದ್ದಾಗಿ ತಿಳಿದುಬಂದಿದೆ.
ದೂರುದಾರ ತೋರಿಸಿದ ಆರನೇ ಜಾಗದಲ್ಲಿ ಆತನ ಸಮ್ಮುಖದಲ್ಲಿ ನೆಲ ಅಗೆಯುವ ಕಾರ್ಯ ಈಗ ನಡೆಯುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ.
ನೆಲ ಅಗೆಯುತ್ತಿದ್ದಂತೆ ನೀರಿನ ಒಸರು ಬರುತ್ತಿದೆ. ನೀರನ್ನು ತೆರವುಗೊಳಿಸಲು ಡೀಸೆಲ್ ಪಂಪ್ ಬಳಸಲಾಗುತ್ತಿದೆ. ನೆಲ ಅಗೆಯುವ ಯಂತ್ರವನ್ನೂ ಕಾಡಿನೊಳಗೆ ಒಯ್ಯಲಾಗಿದೆ.