ಕಾರ್ಕಳ: ವ್ಯಕ್ತಿಯೊಬ್ಬರಿಗೆ ವೀಸಾ ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ಹಣ ಕಳೆದುಕೊಂಡ ವ್ಯಕ್ತಿ. ಇವರ ಮೊಬೈಲ್‌ಗೆ ಫೇಸ್ ಬುಕ್‌ನಲ್ಲಿ AL JABER GROUP ADD ಬಂದಿದ್ದು, ಅದಕ್ಕೆ ಕ್ಲಿಕ್ ಮಾಡಿದಾಗ ವಾಟ್ಸಾಪ್ ಮುಖಾಂತರ ನಾಳೆ ಇಂಟರ್‌ವ್ಯೂ ಇದೆ ಎಂದು ಮೆಸೇಜ್ ಬಂದಿತ್ತು. ಇದನ್ನು ನಂಬಿದ ನವೀನ್ ಮೇಸೆಜನ್ನು ಓಪನ್ ಮಾಡಿ ಅದರಲ್ಲಿ ತಿಳಿಸಿದಂತೆ ತಮ್ಮ ಹೆಸರು ವಿಳಾಸ ಇತ್ಯಾದಿ ವಿವರಗಳನ್ನು ನಮೂದಿಸಿ, ವಾಟ್ಸ್‌ಪ್‌ಗೆ ಅಪರಿಚಿತ ವ್ಯಕ್ತಿ ಕಳುಹಿಸಿದ ವಿವಿಧ ಖಾತೆಗಳಿಗೆ ದಿನಾಂಕ 08/06/2025 ರಿಂದ 25/06/2025ರ ತನಕ ಹಂತ ಹಂತವಾಗಿ ಒಟ್ಟು 12,43,426/- ರೂಪಾಯಿಗಳನ್ನು ಗೂಗಲ್ ಪೇ ಮತ್ತು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.ಈ ಬಗ್ಗೆ ನವೀನ್ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
