ಕುಂದಾಪುರ: ಗ್ರಾಮ ವಿಕಾಸ ಸಮಿತಿ ಸಿದ್ದಾಪುರ,ಗ್ರಾಮ ಪಂಚಾಯತ್ ಸಿದ್ದಾಪುರ, ವಲಯ ಅರಣ್ಯಾಧಿಕಾರಿಗಳ ಕಚೇರಿ ಸಿದ್ದಾಪುರ,ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ವಿಕಾಸ ಸಮಿತಿ ವಿಭಾಗ ಟೋಳಿ ಸದಸ್ಯೆ ರಮಿತಾ ಶೈಲೇಂದ್ರ ಮತ್ತು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಜ್ಯೋತಿ ಕೆ.ಸಿ ಅವರು ವಸತಿ ಶಾಲೆಯ ಪ್ರಾಂಶುಪಾಲ ಗಣೇಶ ಅವರಿಗೆ ಗಿಡ ಹಸ್ತಾಂತರಿಸುವುದರ ಮೂಲಕ ಉದ್ಘಾಟಿಸಿದರು.
ಬಳಿಕ ರಮಿತಾ ಶೈಲೇಂದ್ರ ಅವರು ಮಾತನಾಡಿ ,ಪ್ರಕೃತಿ ನಮಗೆಲ್ಲ ಕೊಟ್ಟಿದೆ. ನಾವು ಅದರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ.ವನಮಹೋತ್ಸವದ ಉದ್ದೇಶ,ನಮ್ಮ ಹಿರಿಯರು ಪ್ರಕೃತಿ ಪೂಜಕರಾಗಿದ್ದರು,ಪ್ರಕೃತಿ ಪೂಜೆಯ ವೈಜ್ಞಾನಿಕ ಹಿನ್ನಲೆ , ಸಮಾಜ ಕಟ್ಟುವಲ್ಲಿ ಗ್ರಾಮ ವಿಕಾಸದ ಪಾತ್ರದ ಕುರಿತು ಮಾತನಾಡಿದರು. ಜ್ಯೋತಿ ಕೆ.ಸಿ ವಲಯ ಅರಣ್ಯಾಧಿಕಾರಿ ಮಾತನಾಡಿ, ಅರಣ್ಯ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ,ಮುಂದಿನ ಪೀಳಿಗೆಗೆ ಪ್ರಕೃತಿ ಪಾಠದ ಅವಶ್ಯಕತೆ ಕುರಿತು ಮಾತನಾಡಿದರು. ಗ್ರಾಮ ವಿಕಾಸ ಸಮಿತಿಯ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಗ್ರಾಮ ವಿಕಾಸ ಸಮಿತಿಯ ಕಾರ್ಯ ಉದ್ದೇಶಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಪ್ರವೀಣ್ ಪಟೇಲ್, ಸಂಘಚಾಲಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಿದ್ದಾಪುರ ತಾಲೂಕು, ಕೃಷ್ಣ ಪೂಜಾರಿ, ಸಂಜೀವ ,ಗಣೇಶ, ಸುಧಾಕರ ಆಜ್ರಿ, ಶ್ರೀಕಾಂತ್ ನಾಯಕ್,ಎಸ್ ಪಾಂಡುರಂಗ ಪೈ , ಭೋಜರಾಜ್ ಶೆಟ್ಟಿ, ಭೋಜ ಶೆಟ್ಟಿ ಕಡ್ರಿ,ಎನ್ .ಜಿ.ಭಟ್ , ಟಿ.ಜಿ.ಪಾಂಡುರಂಗ ಪೈ , ಚಿದಾನಂದ ಶೆಟ್ಟಿ , ಶ್ರೀಕಾಂತ್ ಶೆಣೈ , ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.
