ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣರ ಪ್ರಸಾದ ನೀಡಿ ಮುಂದೆ ಆಗಸ್ಟ್ ನಲ್ಲಿ ಉಡುಪಿಯಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 48 ದಿನಗಳ ಮಂಡಲೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಆಗಸ್ಟ್ ಒಂದರಿಂದ 48 ದಿನಗಳ ಕಾರ್ಯಕ್ರಮ ಉದ್ಘಾಟನೆಗೊಂಡು ಸೆಪ್ಟೆಂಬರ್ 15ರ ವರೆಗೆ ಮಂಡಲೋತ್ಸವ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಮಠದ ಪರವಾಗಿ ಬೆಂಗಳೂರು ಶಾಖಾ ಮಠದ ಮುಖ್ಯಸ್ಥರಾದ ಏ ಬಿ ಕುಂಜಾರ್, ಮತ್ತು ಶ್ರೀಪಾದರ ಕಾರ್ಯದರ್ಶಿ ರತೀಶ್ ತಾಂತ್ರಿಯವರು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು.
