![]() |
| ಡಾ.ಭಾರತಿ ಮರವಂತೆ |
ಉಡುಪಿ: ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಖ್ಯಾತ ಕಲಾವಿದೆ ಡಾ.ಭಾರತಿ ಮರವಂತೆ ಆಯ್ಕೆಯಾಗಿದ್ದಾರೆ.ಈ ನೇಮಕದೊಂದಿಗೆ ಕರಾವಳಿ ಜಿಲ್ಲೆಗಳ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ವಹಿಸಲಾಗಿದೆ.
ಡಾ.ಭಾರತಿ ಮರವಂತೆ ಸಾಧನೆ- ಪ್ರಶಸ್ತಿಗಳು
ರಂಗೋಲಿಯಲ್ಲಿ ಸಂಶೋಧನೆ, ಜಾನಪದ ಕಲೆ -ಸಾಹಿತ್ಯದಲ್ಲಿ 15 ಕ್ಕೂ ಹೆಚ್ಚು ಕೃತಿಗಳು, 100 ಕ್ಕೂ ಹೆಚ್ಚು ಲೇಖನಗಳು, ಕಿರುಯೋಜನೆಗಳು, ಕನ್ನಡ ಜಾನಪದ ನಿಘಂಟುವಿನಲ್ಲಿ ಕ್ಷೇತ್ರತಜ್ಣರಾಗಿ ಕೆಲಸ, ಕರ್ನಾಟಕ ಜಾನಪದ ವಿವಿಯಲ್ಲಿ ಬೋಧಕರಾಗಿ ಅನುಭವ, ಶಿವರಾಮ ಕಾರಂತ ಟ್ರಸ್ಟ್ ನಲ್ಲಿ ಸದಸ್ಯೆ, ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಸ್ಥಾಪಕ ಅಧ್ಯಕ್ಷೆ, ಕರ್ನಾಟಕ ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್. ರಂಗೋಲಿ ಪತ್ರಿಕೆ, ರಂಗೋಲಿ ಕ್ಯಾನ್ ವಾಸ್ ಪೈಂಟಿಂಗ್, ಬೃಹತ್ ರಂಗೋಲಿ ಪ್ರದರ್ಶನ, ತಮಿಳುನಾಡಿನಲ್ಲಿ ರಂಗೋಲಿಯಲ್ಲಿ ವಿಶ್ವದಾಖಲೆ, ಮಕ್ಕಳಿಗೆ ರಂಗೋಲಿ ತರಬೇತಿ, ಸ್ವರಚಿತ ರಂಗೋಲಿ ವಿನ್ಯಾಸಗಳ ರಚನೆ ಪ್ರಕಟಣೆ ಇತ್ಯಾದಿ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 100 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಇವರು ಪಡೆದಿರುತ್ತಾರೆ.

