ಉಡುಪಿ: ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣದ ವಿಷಯ ತಿಳಿದ ಬಳಿಕ ತುಳುನಾಡ ಪರಿಷತ್ನ ಪದಾಧಿಕಾರಿಗಳು ಪ್ರದೀಪ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ, ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕುಟುಂಬದವರಿಗೆ ಧೈರ್ಯ ತುಂಬಿ, ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ
ತುಳುನಾಡ ಪರಿಷತ್ನ ಸ್ಥಾಪಕ ಅಧ್ಯಕ್ಷ ರೋಹಿತ್ ಕರಂಬಳ್ಳಿ, ಜಿಲ್ಲಾಧ್ಯಕ್ಷ ಜಯರಾಮ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಉಪಾಧ್ಯಕ್ಷರಾದ ಮೋಹನ್ ಕಲ್ಮಾಡಿ ಹಾಗೂ ಶೇಖರ್ ಕೊಟ್ಯಾನ್, ಮಹಿಳಾ ಘಟಕದ ಪ್ರೀತಿ ಕಲ್ಯಾಣಪುರ, ಆಶಾ ಚಂದ್ರಶೇಖರ ಸೇರಿದಂತೆ ಪರಿಷತ್ನ ಇತರ ಸದಸ್ಯರು ಉಪಸ್ಥಿತರಿದ್ದರು.
