ಶಿರ್ವ: ಕಾರ್ಕಳ- ಮೂಡುಬೆಳ್ಳೆ-ಉಡುಪಿ ರಾಜ್ಯ ಹೆದ್ದಾರಿಯ ಎಡ್ಮೇರು ಬಳಿ ಬೈಕೊಂದು ವಾಹನ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಬಡಿದು ಸವಾರ ಶಿರ್ವ ಕಡಂಬು ನಿವಾಸಿ ಸುಕೇಶ್ ಆಚಾರ್ಯ (24) ಮೃತಪಟ್ಟ ಘಟನೆ ಸೋಮವಾರ (ನ.9)ಸಂಜೆ ನಡೆದಿದೆ.
ಗಂಭೀರ ಗಾಯಗೊಂಡವರನ್ನು ಸ್ಥಳೀಯರು ಸೇರಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಯುವಕ ತಂದೆ ತಾಯಿ,ಸಹೋದರ,ಸಹೋದರಿಯನ್ನು ಅಗಲಿದ್ದಾರೆ.
ವಾಹನ ರಿಪೇರಿಗಾಗಿ ಯಾರದೋ ಕರೆ ಬಂದ ಹಿನ್ನೆಲೆಯಲ್ಲಿ ಮೂಡುಬೆಳ್ಳೆ ನಾಲ್ಕು ಬೀದಿಗೆ ತೆರಳಿದ್ದ ಆತ ಅಲ್ಲಿಂದ ಮನೆಗೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.
