ಬ್ರಹ್ಮಾವರ: ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆ ಹಾಗೂ ಹಿರಿಯ ನಾಗರಿಕ ಕ್ರಿಯಾ ಯೋಜನೆಯ ಅಡಿಯಲ್ಲಿ ಮರೆವಿನ ಖಾಯಿಲೆ (ಡಿಮೆನ್ಶಿಯಾ ) ವೈದ್ಯಕೀಯ ಶಿಬಿರವು ದಿನಾಂಕ 07/10/2026 ರಂದು ಬ್ರಹ್ಮಾವರದ ರೋಟರಿ ಸಮಾಜ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಭಾರತ ಸರ್ಕಾರ, ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಬ್ರಹ್ಮಾವರ, ಹಿರಿಯ ನಾಗರಿಕರ ವೇದಿಕೆ ಬ್ರಹ್ಮಾವರ ಹಾಗೂ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವುಗಳ ಜಂಟಿ ಸಹಯೋಗದೊಂದಿಗೆ ವಿಶೇಷವಾಗಿ ಆಯೋಜನೆಗೊಂಡಿತ್ತು. ತನ್ನಿಮಿತ್ತ ಸಭಾ ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ರೋಟರಿ ಸಮಾಜ ಮಂದಿರದಲ್ಲಿ ಆರಂಭವಾಯಿತು.
ಉದ್ಘಾಟಕರಾಗಿ ಡಾ. ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಉಡುಪಿ ಜಿಲ್ಲೆ, ಅಧ್ಯಕ್ಷರಾಗಿ ರೋ.ಎಚ್. ಪ್ರಮೋದ್ ಶೆಟ್ಟಿ, ಅಧ್ಯಕ್ಷರು ರೋಟರಿ ಕ್ಲಬ್ ಬ್ರಹ್ಮಾವರ, ಮುಖ್ಯ ಅತಿಥಿಗಳಾಗಿ ಡಾ. ಲತಾ ನಾಯಕ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳು ಉಡುವೆ ಜಿಲ್ಲೆ, ಶ್ರೀ ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷರು ಹಿರಿಯ ನಾಗರಿಕರ ವೇದಿಕೆ, ಬ್ರೃಹ್ಮಾವರ, ಶ್ರೀಮತಿ ರತ್ನ , ಜಿಲ್ಲಾವಿಕಲಚೇತನರ ಹಾಗೂ ನಾಗರೀಕರ ಸಬಲೀಕರಣ ಅಧಿಕಾರಿ, ಉಡುಪಿ ಜಿಲ್ಲೆ , ಶ್ರೀಮತಿ ವಿಜಯಲಕ್ಷ್ಮೀ ಹೇರೂರು , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಉಡುಪಿ ಜಿಲ್ಲೆ, ರೋ . ಅರುಣ್ ಕುಮಾರ್ , ಕಾರ್ಯದರ್ಶಿ , ರೋಟರಿ ಕ್ಲಬ್ ಬ್ರಹ್ಮಾವರ , ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಿ. ವಿ. ಭಂಡಾರಿ , ನಿರ್ದೇಶಕರು, ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳು. ಡಾ.ಮಾನಸ್ E.R. ಮನೋವೈದ್ಯರು, ಡಾ ಎ . ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಡಾ. ಚಿತ್ರಾ, ಮನೋವೈದ್ಯರು KMC ಮಣಿಪಾಲ ಇವರುಗಳು ಸಭೆಯಲ್ಲಿ ಉಪಸ್ಥಿರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ರತ್ನ , ಜಿಲ್ಲಾವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ, ಉಡುಪಿ ಜಿಲ್ಲೆ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನೂ ಸ್ವಾಗತ ಗೈದರು. ತದ ನಂತರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಉಡುಪಿ ಜಿಲ್ಲೆ ಇವರು ಸರ್ಕಾರದ ಯಾವುದೇ ಸಹಾಯ ಇಲ್ಲದೇ ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಡಾ ಎ.ವಿ. ಬಾಳಿಗಾ ಸಂಸ್ಥೆಯು ಕಳೆದ 25 ವರ್ಷಗಳಿಂದ ನಡೆಸುತ್ತಿರುವ ಉಚಿತ ಮಾನಸಿಕ ಆರೋಗ್ಯ ಶಿಬಿರವನ್ನು ಹಾಗೂ ಸಮಾಜಮುಖಿ ನಿಸ್ವಾರ್ಥ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಅದರೊಂದಿಗೆ ಮುಂದಿನ ದಿನಗಳಲ್ಲಿ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿಯೂ ತಿಳಿಸಿದರು. ಮುಖ್ಯ ಅತಿಥಿಗಳಾದ ಡಾ.ಲತಾ ನಾಯಕ್ ಇವರು ಸರ್ಕಾರದ ಉತ್ತಮ ಆರೋಗ್ಯ ಯೋಜನೆಗಳನ್ನು ತಿಳಿಸಿ , ಇಂದಿನ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ವಿಜಯಲಕ್ಷ್ಮೀ ಹೇರೂರು ಇವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕುಟುಂಬದ ಮಹತ್ವ ತಿಳಿಸಿದರು. ಅಂತೆಯೇ ಶಿಬಿರಕ್ಕೆ ಶುಭ ಹಾರೈಸಿದರು. ಸಂಪಸ್ಕೂಲ ವ್ಯಕ್ತಿಗಳಾದ ಡಾ. ಪಿ.ವಿ. ಭಂಡಾರಿ ಇವರು ಮಾತನಾಡಿ ಮರೆವಿನ ಖಾಯಿಲೆಯ ಬಗ್ಗೆ ವಿವರಿಸಿ ಗುರುತಿಸುವಿಕೆ ಹಾಗೂ ತಡೆಗಟ್ಟುವಲ್ಲಿ ದೈನಂದಿನಲ್ಲಿ ಅಡವಳಿಸಿ ಕೊಳ್ಳಬಹುದಾದ ಚಟುವಟಿಕೆಯ ಬಗ್ಗೆಯೂ ಮಾಹಿತಿ ನೀಡಿದರು . ಮುಂದಿನ ಭಾಗದಲ್ಲಿ ರೋಟರಿ ಸಂಸ್ಥೆ ನಡೆಸುತ್ತಿರುವ ಉಚಿತ ಮನೋವೈದ್ಯಕೀಯ ಶಿಬಿರಕ್ಕೆ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು. ನಂತರ ಅಧ್ಯಕ್ಷೀಯ ಭಾಷಣ ಮಾಡಿದ ರೋ . ಎಚ್ . ಪ್ರಮೋದ ಶೆಟ್ಟಿ ಇವರು ಸರ್ಕಾರ ಮತ್ತು ಆರೋಗ್ಯ ಇಲಾಖೆ ಸಹಾಯ ಮಾಡಿದಲ್ಲಿ ಹಮ್ಮಿಕೊಂಡಿರುವ ಉಚಿತ ಶಿಬಿರದಂತಹ ಯೋಜನೆಗಳು ಸಮಾಜವನ್ನು ಹೆಚ್ಚು ತಲುಪಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶಿವಾಜಿ , ಯೋಜನಾ ಸಹಾಯಕರು , ಜಿಲ್ಲಾ ವಿಕಲ ಚೇತನರ ಕಲ್ಯಾಣ ಅಧಿಕಾರಿಗಳವರ ಕಛೇರಿ ಇವರು ವಂದನಾರ್ಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀವಿಶ್ವೇಶ್ವರ ಹೆಗಡೆ ಇವರು ಪ್ರಾರ್ಥನೆ ಮತ್ತು ನಿರೂಪಣೆಗೈದರು. ನಂತರ ಶಿಬಿರದಲ್ಲಿ ಉಚಿತ ತಪಾಸಣಾ ಕಾರ್ಯಕ್ರಮ ನಡೆಯಿತು. ಡಾ. ಎ. ವಿ . ಬಾಳಿಗಾ ಸ್ಮಾರಕ ಆಸ್ಪತ್ರೆ ಮನೋವೈದ್ಯರು , ಆಪ್ತ ಸಮಾಲೋಚಕರುಗಳು , ಶುಶ್ರೂಷಕಿಯರು ವಿವಿಧ ತಪಾಸಣೆ ನಡೆಸಿದರು. ಸುಮಾರು 200 ಸಂಖ್ಯೆಯಲ್ಲಿ ಜನರು ಇದರ ಉಪಯೋಗ ಪಡೆದರು. ಅರ್ಧ ದಿನದ ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನೆರವೇರಿತು.








