ನಾಡೋಜ ಡಾ.ಜಿ. ಶಂಕರ್ ಅವರ 71 ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡ ಹಾಗೂ ಇತರೆ ಜಿಲ್ಲೆಗಳಲ್ಲಿರುವ ಆಯ್ದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್, ಕಿಡ್ನಿ ಹಾಗೂ ಹೃದ್ರೋಗಿಗಳಿಗೆ, ವಿಶೇಷ ಶಾಲೆಗಳಿಗೆ, ಹಿರಿಯ ಹಾಗೂ ನುರಿತ ಯಕ್ಷಗಾನ ಕಲಾವಿದರಿಗೆ, ಸಾರ್ವಜನಿಕ ರುದ್ರಭೂಮಿಗಳಲ್ಲಿ ಶವ ಸಂಸ್ಕಾರ ಕೆಲಸ ಕಾರ್ಯಗಳಿಗೆ ತೊಡಗಿರುವ ಬಂಧುಗಳಿಗೆ ಸಹಾಯಧನ ವಿತರಿಸಲಾಗಿದೆ.
ಕೆಎಂಸಿ ಮಣಿಪಾಲ 145 ಕ್ಯಾನ್ಸರ್ ರೋಗಿಗಳು ಹಾಗೂ 28 ಕಿಡ್ನಿ ರೋಗಿ ಮತ್ತು ಹೃದ್ರೋಗಿಗಳಿಗೆ, ಕೆಎಂಸಿ ಅತ್ತಾವರ-ಮಂಗಳೂರು 53 ಕ್ಯಾನ್ಸರ್ ಹಾಗೂ 46 ಕಿಡ್ನಿ, ಕೆಎಂಸಿ ಮಂಗಳೂರು ಜ್ಯೋತಿ 17 ಕ್ಯಾನ್ಸರ್ ಹಾಗೂ 50 ಕಿಡ್ನಿ, ಫಾದರ್ ಮುಲ್ಲರ್ ಮಂಗಳೂರು 76 ಕ್ಯಾನ್ಸರ್ ಹಾಗೂ 19 ಕಿಡ್ನಿ, ವೆನ್ಸಾಕ್ ಆಸ್ಪತ್ರೆ ಮಂಗಳೂರು 45 ಕ್ಯಾನ್ಸರ್ ಹಾಗೂ 35 ಕಿಡ್ನಿ, ಎಂಎಲ್ಒ ಮಂಗಳೂರು 24 ಕ್ಯಾನ್ಸರ್, ಸರಕಾರಿ ಆಸ್ಪತ್ರೆ ಮಂಗಳೂರು 11 ಕ್ಯಾನ್ಸರ್ ಹಾಗೂ 2 ಕಿಡ್ನಿ, ಆದರ್ಶ ಆಸ್ಪತ್ರೆ ಉಡುಪಿ 17 ಕ್ಯಾನ್ಸರ್ ಹಾಗೂ 29 ಕಿಡ್ನಿ, ಗಾಂಧಿ ಆಸ್ಪತ್ರೆ ಉಡುಪಿ 6 ಕ್ಯಾನ್ಸರ್, ಸರಕಾರಿ ಆಸ್ಪತ್ರೆ ಕುಂದಾಪುರ 11 ಕ್ಯಾನ್ಸರ್ ಹಾಗೂ 5 ಕಿಡ್ನಿ, ಸರಕಾರಿ ಆಸ್ಪತ್ರೆ ಬ್ರಹ್ಮಾವರ 10 ಕಿಡ್ನಿ, ಇತರೆ 7 ಕ್ಯಾನ್ಸರ್ ಸೇರಿದಂತೆ ಒಟ್ಟು 412 ಕ್ಯಾನ್ಸರ್ ರೋಗಿಗಳು ಹಾಗೂ 224 ಕಿಡ್ನಿ ಸಮಸ್ಯೆ ಬಾಧಿತರಿಗೆ ಸಹಾಯಹಸ್ತವನ್ನು ನೀಡಲಾಗಿದೆ.
ಉಭಯ ಜಿಲ್ಲೆಗಳ ಹಿರಿಯ ಯಕ್ಷಗಾನ ಕಲಾವಿದರಾಗಿರುವ 89 ಮಂದಿಗೆ, ಉಭಯ ಜಿಲ್ಲೆಗಳ ವಿಶೇಷ ಶಾಲೆ (31) ಹಾಗೂ ರುದ್ರಭೂಮಿಯಲ್ಲಿ ದಿನಂಪ್ರತಿ ಶವ ಸಂಸ್ಕಾರದಲ್ಲಿ ತೊಡಗಿರುವ ಬಂಧುಗಳಿಗೆ ಸಹಾಯಹಸ್ತವನ್ನು ನೀಡಲಾಗಿದೆ.
ಕ್ಯಾನ್ಸರ್, ಕಿಡ್ನಿ, ವಿಶೇಷ ಶಾಲೆ ಹಾಗೂ ರುದ್ರಭೂಮಿ ನೌಕರರಿಗೆ ತಲಾ 25,000 ದಂತೆ ಹಾಗೂ ಯಕ್ಷಗಾನ ಕಲಾವಿದರಿಗೆ ತಲಾ 10,000 ರೂ. ದಂತೆ ಅವರವರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ನೇರ ಜಮೆ ಮಾಡಲಾಗಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಉಡುಪಿ ಪ್ರಕಟಣೆ ತಿಳಿಸಿದೆ.
ನಾಡೋಜ ಡಾ.ಜಿ. ಶಂಕರ್ ಅವರ 71 ನೇ ಹುಟ್ಟುಹಬ್ಬದ ಅಂಗವಾಗಿ ಡಾ.ಜಿ. ಶಂಕರ್ ದಂಪತಿಗಳು ಎರಡು ಕಿಡ್ನಿ ವೈಫಲ್ಯತೆ ಭಾದಿತರಾಗಿರುವ ಕಿದಿಯೂರು ವಿನಯ ಟಿ. ಸುವರ್ಣ ಅವರಿಗೆ ಸಹಾಯಹಸ್ತ ಚೆಕ್ ಹಸ್ತಾಂತರಿಸಿದರು.

