ಕರ್ನಾಟಕ SIR ಅಂತಿಮ ಪಟ್ಟಿ ಪ್ರಕಟ; 4.54 ಕೋಟಿ ಮತದಾರರು

 


ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಂತಿಮ ಪಟ್ಟಿಯು ಮಂಗಳವಾರ ಪ್ರಕಟವಾಯಿತು.


ರಾಜ್ಯದ 4,54,55,689 ಕೋಟಿ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಇರುವುದಾಗಿ ಚುನಾವಣೆ ಆಯೋಗ ತಿಳಿಸಿದೆ. ಇವರಲ್ಲಿ 2,25,40,493 ಪುರುಷರು ಮತ್ತು 2,29,12,355 ಮಹಿಳಾ ಮತದಾರರು ಇದ್ದಾರೆ. 2841 ಲಿಂಗತ್ವ ಅಲ್ಪಸಂಖ್ಯಾತರ ಸೇರಿ ರಾಜ್ಯದಲ್ಲಿ ಒಟ್ಟು 4.54,55,689 ಕೋಟಿ ಮತದಾರಿದ್ದಾರೆ.


ಭಾರತೀಯ ಚುನಾವಣಾ ಆಯೋಗವು ರಾಜ್ಯದಲ್ಲಿ ಜೂನ್ 16ರಂದು ಎಸ್‌ಐಆರ್‌ಗೆ ಅಧಿಸೂಚನೆ ಹೊರಡಿಸಿತ್ತು. ಅವರೆಗೆ ಚಾಲ್ತಿಯಲ್ಲಿದ್ದ 2025ರ ಮತದಾರರ ಪಟ್ಟಿಯನ್ನು 'ಫ್ರೀಜ್' ಮಾಡಲಾಗಿತ್ತು. ಆಗ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರು ಇದ್ದರು.

ಎಸ್‌ಐಆ‌ರ್ ಪ್ರಕ್ರಿಯೆ ಮೊದಲ ಹಂತದಲ್ಲಿ 1.08 ಕೋಟಿ ಮತದಾರರನ್ನು ಎಎಸ್‌ಡಿಡಿಒ (ಪತ್ತೆಯಾಗದ/ಸ್ಥಳಾಂತರ/ಮೃತ/ಒಂದಕ್ಕಿಂತ ಹೆಚ್ಚುಕಡೆ ನೋಂದಣಿ ಮತ್ತು ಇತರೆ) ಎಂದು ಕರಡು ಮತದಾರರ ಪಟ್ಟಿಯಿಂದ ಹೊರಗೆ ಇಡಲಾಗಿತ್ತು. ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 4.46 ಕೋಟಿ ಮತದಾರರು ಸ್ಥಾನ ಪಡೆದಿದ್ದರು.