ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ ಕೆ ಅವರಿಗೆ ಉಡುಪಿ ನಗರಸಭೆ ವ್ಯಾಪ್ತಿ, ಉಡುಪಿ ನಗರಸಭೆಯ ಗ್ರಾಮಾಂತರ ಭಾಗ ಹಾಗೂ ನಗರ ಭಾಗದಲ್ಲಿರುವ ದಾರಿದೀಪ ಹಾಗೂ ಹೈಮಾಸ್ಟ್ ಲೈಟ್ಗಳು ಹದಗೆಟ್ಟು ಹೋಗಿರುವ ಕುರಿತು ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಮಸ್ತ ನಾಗರಿಕರ ಪರವಾಗಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಮೀನಾಕ್ಷಿ ಮಾಧವ ಬನ್ನಂಜೆ, ಗಣೇಶ್ ನೆರ್ಗಿ, ಸುಕೇಶ್ ಕುಂದರ್, ಸತೀಶ್ ಕುಮಾರ್ ಮಂಚಿ, ಸಂಧ್ಯಾ ತಿಲಕ್ರಾಜ್, ಭರತ್ ಕುಮಾರ್, ರಮೇಶ್ ಪಾಲ್ ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.

