ED ದಾಳಿ ಕಾನೂನುಬದ್ಧ: ರಾಜಕೀಯ ಉದ್ದೇಶದ ಟೀಕೆ ಬೇಡ; ಕೇಂದ್ರ ಸರ್ಕಾರ, ಬಿಜೆಪಿಗೂ ದಾಳಿಗೂ ಸಂಬಂಧವಿಲ್ಲ - ಕೋಟ ಶ್ರೀನಿವಾಸ್ ಪೂಜಾರಿ


 

ಉಡುಪಿ: ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುತ್ತಿದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್‌ ಆರೋಪಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ಇಡಿ ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ದಾಳಿ ಕಾನೂನುಬದ್ಧವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಇಡಿ ದಾಳಿಗಳು ನಡೆದಿವೆ. ಆಗ ಕೇಂದ್ರ ಸರ್ಕಾರಕ್ಕೂ ದಾಳಿಗೂ ಸಂಬಂಧವಿಲ್ಲ ಎಂದು ಹೇಳಲಾಗಿತ್ತು. ಅದೇ ಮಾತು ಈಗಲೂ ಅನ್ವಯಿಸುತ್ತದೆ ಎಂದರು.


ಉಡುಪಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಗತವಾಗಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಯಾರಿಗೂ ದೂರು-ದುಮ್ಮಾನ ಇಲ್ಲ. ಆದರೆ ಇಡಿ ದಾಳಿಯನ್ನು ರಾಜಕೀಯ ಉದ್ದೇಶದಿಂದ ಟೀಕಿಸಿದರೆ ಮಾತಿಗೆ ತೂಕ ಇರುವುದಿಲ್ಲ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಅಥವಾ ಬಿಜೆಪಿ ಈ ದಾಳಿಗೆ ಹೊಣೆ ಅಲ್ಲ ಎಂದು ಕೋಟ ಸ್ಪಷ್ಟಪಡಿಸಿದರು.