ಕಾರ್ಕಳ ಪುರಸಭೆಗೆ ವ್ಯಾಪ್ತಿಯಲ್ಲಿ ಬರುವ ಮಾರುಕಟ್ಟೆ ಪಾರ್ಕಿಂಗ್ ಸ್ವಚ್ಛತೆ ಹಾಗೂ ನಿರ್ವಹಣೆ ಇಲ್ಲದೆ ದುರ್ನಾಥ ಬರುತ್ತಿದೆ.ಪುರಸಭೆ ಅಧಿಕಾರಿಗಳು ನಿದ್ರೆಯಿಂದ ಎಚ್ಚರವಾಗಿ ಒಮ್ಮೆ ಮಾರುಕಟ್ಟೆ ವ್ಯವಸ್ಥೆಗಳನ್ನು ನೋಡಿ.
ಮಾರುಕಟ್ಟೆ ಸುಂಕ ತೆಗೆದು ಕೊಳ್ಳುವವರು ಸರಿಯಾಗಿ ಕೆಲಸ ಮಾಡಬೇಕು ಅಲ್ವಾ, ಮಾರುಕಟ್ಟೆಯ ತ್ಯಾಜ್ಯ, ಕೊಳೆತ ಮೀನು, ಸರಿಯಾದ ಸ್ವಚ್ಛತೆಯ ವ್ಯವಸ್ಥೆ ಇಲ್ಲದೇ ಅಲ್ಲೇ ಮೂತ್ರ ವಿಸರ್ಜನೆ ಆಗಿ ಮನುಷ್ಯರು ನಡೆದಾಡದ ಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನ ಕೊಡದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಪುರಸಭೆ ಮುತ್ತಿಗೆ ಹಾಕಬೇಕಾದೀತು. ನಿಮ್ಮ ಕೆಲಸಗಳನ್ನು ನಾವು ನೆನಪು ಮಾಡಿಸುವಂತೆ ಮಾಡಬೇಡಿ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.



