ಕಟಪಾಡಿ: ರವಿ ಫ್ರೆಂಡ್ಸ್ ಕಟಪಾಡಿ ವತಿಯಿಂದ ಕಳೆದ 14 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ವೇಷ ಧರಿಸಿ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆ ಗಾಗಿ ವಿನಿಯೋಗಿಸಿದವರು ,ರವಿ ಕಟಪಾಡಿ. ಮಾಮೂಲಿ ಕೂಲಿ ಕೆಲಸ ಮಾಡುವ ರವಿ ಕಟಪಾಡಿಯ ಈ ಮಾನವೀಯ ಸೇವಾ ಕಾರ್ಯ ಈ ಅಷ್ಠಮಿಯಲ್ಲೂ ಮುಂದುವರೆಯಲಿದೆ.ಈ ಬಾರಿ ವಿಶಿಷ್ಟ ವೇಷ ಧರಿಸಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ವಿನಿಯೋಗಿಸಲು ಅವರು ನಿರ್ಧಾರ ಮಾಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ನಮ್ಮ ತಂಡದಿಂದ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಒಟ್ಟು ₹1.85 ಕೋಟಿ ಮೊತ್ತವನ್ನು 204 ಅನಾರೋಗ್ಯ ಪೀಡಿತ ಪುಟಾಣಿ ಮಕ್ಕಳಿಗೆ ಹಸ್ತಾಂತರಿಸಿ, ಅವರ ಚಿಕಿತ್ಸೆಗೆ ನೆರವು ನೀಡಿದ್ದೇವೆ. ಕಳೆದ 14 ವರ್ಷಗಳಿಂದ ಈ ಸೇವೆ ಮಾಡಿಕೊಂಡು ಬಂದಿದ್ದು ಈ ಬಾರಿ ತಂಡವು 15ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ವೇಷ ಧರಿಸಲು ಮುಂದಾಗಿದೆ.
ಈ ವರ್ಷ ತಮ್ಮ ಹಾಗೂ ತಂಡದ ಸದಸ್ಯರ ಕೊನೆಯ ಕೃಷ್ಣ ಜನ್ಮಾಷ್ಟಮಿ ವೇಷವಾಗಿದ್ದು, ಇನ್ನು ಮುಂದೆ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸುವುದಿಲ್ಲ.ಹಾಗಾಗಿ ಈ ಬಾರಿ ದಾನಿಗಳು ಹೆಚ್ಚಿನ ಸಹಾಯಧನ ನೀಡಬೇಕು ಎಂದು ರವಿ ಕಟಪಾಡಿ ಮನವಿ ಮಾಡಿದ್ದಾರೆ.
ಸೆ. 4 ಮತ್ತು 5 ರಂದು ಅಷ್ಟಮಿ ಸಂದರ್ಭದಲ್ಲಿ ಸಮುದ್ರ ಜೀವಿಯೊಂದರ ವಿಶಿಷ್ಟ ವೇಷ ಧರಿಸಿ ನಗರದೆಲ್ಲೆಡೆ ಸಂಚಾರ ಮಾಡಿ ಹಣ ಸಂಗ್ರಹ ಮಾಡುತ್ತೇವೆ. ಈ ವರ್ಷ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧರಿಸಿದ್ದೇವೆ.
ಪುಟಾಣಿ ಮಕ್ಕಳ ಚಿಕಿತ್ಸೆಗೆ ನೆರವಾಗುವ ಈ ಸೇವಾ ಕಾರ್ಯಕ್ಕೆ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡುವಂತೆ ರವಿ ಕಟಪಾಡಿ ಮನವಿ ಮನವಿ ಮಾಡಿದ್ದಾರೆ.



