ಉಡುಪಿ: ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಆರಂಭಗೊಂಡಿವೆ. ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆಯಾಗಿಲ್ಲ.ಬದಲಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೊರಗಿನಿಂದ ನೋಟ್ ಬುಕ್ ತರುವಂತೆ ಹೇಳಿದ್ದಾರೆ.ಇದು ಸರಿಯಲ್ಲ, ಸರಕಾರವೇ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಬೇಕು ಎಂದು ಮಾನವತೆ ಮತ್ತು ಸಾಮಾಜಿಕ ನ್ಯಾಯ ಚಿಂತಕ ಡಾ. ಫತಾವುಲ್ಲಾ ಸಾಹೇಬ್ ಎಫ್ ಎಂ ಅವರು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರದಲ್ಲಿ ಮನವಿ ಮಾಡಿದ್ದಾರೆ.
ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳು ಬಡವರಾಗಿದ್ದಾರೆ.ಹೊರಗಢಯಿಂದ ನೋಟ್ ಬುಕ್ ಕೊಂಡುಕೊಳ್ಳಲು ಸಾವಿರ ರೂ.ತನಕ ವೆಚ್ಚವಾಗುತ್ತದೆ.ಇದನ್ನು ಭರಿಸಲು ಬಡವರಿಗೆ ಸಾಧ್ಯವಿಲ್ಲ. ಸರಕಾರ ತಕ್ಷಣ ಸರಕಾರಿ ಶಾಲೆಯ ಮಕ್ಕಳಿಗೆ ಸರಕಾರದ ವತಿಯಿಂದಲೇ ನೋಟ್ ಪುಸ್ತಕವನ್ನು ಉಚಿತವಾಗಿ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

