ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಗೆ ಭಾರತದಲ್ಲಿ ಮೂಗುದಾರ !

 


ನವದೆಹಲಿ : ದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸಂಚಲನ ಮೂಡಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆನ್‌ಲೈನ್‌ನಲ್ಲಿ ಅಪಾರ ಸಂಖ್ಯೆಯ ಹಿಂಬಾಲಕರನ್ನು ಪಡೆಯುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸಿಜೆಪಿ ಖಾತೆಯ ಹಿಂಬಾಲಕರ ಸಂಖ್ಯೆ 14.4 ಮಿಲಿಯನ್ ದಾಟಿದೆ. ಇದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿ ಹಾಗೂ ದೇಶದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಸಂಖ್ಯೆಗಿಂತ ಹೆಚ್ಚು.ಮೇ 16ರಂದು ಈ ಖಾತೆ ಆರಂಭವಾಗಿತ್ತು.

ಕಾಂಗ್ರೆಸ್‌ನ ಇನ್‌ಸ್ಟಾಗ್ರಾಮ್ ಖಾತೆಗೆ 13.3 ಮಿಲಿಯನ್ ಹಿಂಬಾಲಕರು ಇದ್ದರೆ, ಬಿಜೆಪಿ ಖಾತೆಗೆ 8.8 ಮಿಲಿಯನ್ ಫಾಲೋವರ್ಸ್‌ ಇದ್ದಾರೆ.

ಸಿಜೆಐ ಅವರು , ನಿರುದ್ಯೋಗಿ ಯುವಕರು ವ್ಯವಸ್ಥೆಯ ಮೇಲೆ ದಾಳಿ ಮಾಡುವ ಜಿರಳೆಗಳಿದ್ದಂತೆ ಎಂದಿದ್ದರು. ಇದರ ವಿರುದ್ದ ಈ ಆನ್‌ಲೈನ್‌ ಅಭಿಯಾನ ಆರಂಭವಾಗಿತ್ತು.ಸದ್ಯ ಸಿಜೆಪಿಯ ಎಕ್ಸ್ ಖಾತೆಗೆ ಭಾರತದಲ್ಲಿ ಗುರುವಾರ ನಿರ್ಬಂಧ ಹೇರಲಾಗಿದೆ.