ಇಂದು ಪಂಚ ರಾಜ್ಯಗಳ ಚುನಾವಣಾ ಮತ ಎಣಿಕೆ - ಕೌಂಟಿಂಗ್ ಶುರು...ಫಲಿತಾಂಶ ಕುತೂಹಲ....



ನಾಲ್ಕು ರಾಜ್ಯಗಳಾದ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (ಮೇ 4, ಸೋಮವಾರ) ಹೊರಬೀಳಲಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಅಚ್ಚರಿಯ ಫಲಿತಾಂಶಗಳನ್ನು ಭವಿಷ್ಯ ನುಡಿದಿದ್ದು, ಹೀಗಾಗಿ, ಈ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಯಾರ ಪಾಲಾಗಲಿದೆ, ಆಡಳಿತದ ಚುಕ್ಕಾಣಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಇಡೀ ದೇಶವನ್ನೇ ಆವರಿಸಿದೆ.

ಚುನಾವಣೆ ನಡೆದ ಈ ಐದು ರಾಜ್ಯಗಳು ಭಾರತದ ರಾಜಕೀಯ ಭೂಪಟದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ನಿರ್ದಿಷ್ಟವಾಗಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳ ಫಲಿತಾಂಶಗಳು ದೇಶದ ರಾಜಕಾರಣದ ದಿಕ್ಕೂಚಿಯಾಗಬಲ್ಲವು. ಅದೇ ರೀತಿ, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಕೂಡ ಇಂದು ತನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. ಮತ ಎಣಿಕೆ ಮುಂದುವರಿದಂತೆ, ಆರಂಭಿಕ ಟ್ರೆಂಡ್‌ಗಳು ಮತ್ತು ಫಲಿತಾಂಶಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಮಧ್ಯಾಹ್ನ ಮತ್ತು ಸಂಜೆಯ ಹೊತ್ತಿಗೆ, ಸರ್ಕಾರ ರಚನೆ ಮತ್ತು ಸ್ಥಾನಗಳ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ. ಪಶ್ಚಿಮ ಬಂಗಾಳದ ಫಲಿತಾಂಶ ಸಂಜೆ ವೇಳೆಗೆ ಸಿಗುವ ಸಾಧ್ಯತೆ ಇದೆ.