ಮತ್ತೆ ಪೆಟ್ರೋಲ್ ಡೀಸೆಲ್ ದರ ಏರಿಕೆ - ಹತ್ತೇ ದಿನಗಳಲ್ಲಿ 3 ನೇ ಬಾರಿ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ:

 

ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರತಿ ಲೀಟರ್‌ ಪೆಟ್ರೋಲ್‌ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಮತ್ತೆ ಏರಿಕೆಯಾಗಿದೆ.

ಮೇ 15ರಂದು ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ತಲಾ ₹3ರಷ್ಟು ಹೆಚ್ಚಿಸಿತ್ತು. ಬಳಿಕ ಮೇ 19ರಂದು ಪೆಟ್ರೋಲ್‌ ಮತ್ತು ಡೀಸೆಲ್ ದರ ತಲಾ 90 ಪೈಸೆ ಏರಿಕೆ ಮಾಡಲಾಗಿತ್ತು.

ಇದೀಗ ಇಂಧನ ದರ ಮತ್ತೆ ಏರಿಕೆ ಮಾಡಿದ್ದು, ಕಳೆದ 10 ದಿನಗಳಲ್ಲಿ ಮೂರನೇ ಬಾರಿಗೆ ದರ ಹೆಚ್ಚಿಸಿದಂತಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹99.51ರಷ್ಟಿದ್ದರೆ, ಡೀಸೆಲ್ ದರ ₹92.49ಕ್ಕೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹107.14ಕ್ಕೆ ಏರಿಕೆಯಾಗಿದ್ದರೆ, ಡೀಸೆಲ್ ದರ ₹95.04ರಷ್ಟಿದೆ.

ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹108.49ರಷ್ಟಿದ್ದರೆ, ಡೀಸೆಲ್ ದರ ₹95.02ಕ್ಕೆ ಏರಿಕೆಯಾಗಿದೆ.

ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆಯಲ್ಲಿ 94 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹110.64 ತಲುಪಿದ್ದರೆ, ಡೀಸೆಲ್ ಬೆಲೆ 94 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹97.02 ಆಗಿದೆ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 82 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹105.31ಕ್ಕೆ ಮತ್ತು ಡೀಸೆಲ್ ಬೆಲೆ 87 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹96.98ಕ್ಕೆ ತಲುಪಿದೆ.