ಬಂಗಾಳದಲ್ಲಿ ದೀದಿ ಕೋಟೆ ಛಿದ್ರ- ಮತದಾನೋತ್ತರ ಸಮೀಕ್ಷೆ ಭವಿಷ್ಯ



ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ, ಕೇರಳ ಹಾಗೂ ಅಸ್ಸಾಂ ವಿಧಾಸಭೆಗಳಿಗೆ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.

ಎಐಎಡಿಎಂಕೆ-ಬಿಜೆಪಿ ನೇತೃತ್ವದ ಎನ್‌ಡಿಎ, ಆಡಳಿತಾರೂಢ ಡಿಎಂಕೆ ಮತ್ತು ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹಣಾಹಣಿಗೆ ವೇದಿಕೆಯಾಗಿದ್ದ ತಮಿಳುನಾಡಿನಲ್ಲಿ ಈ ಬಾರಿಯೂ ಡಿಎಂಕೆ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ.

2011ರಿಂದಲೂ ಅಧಿಕಾರದಲ್ಲಿರುವ ಟಿಎಂಸಿ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಡುವಣ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಗೆ ಅಧಿಕಾರ ಸಿಗಬಹುದು ಎಂಬುದು ಮತದಾನೋತ್ತರ ಸಮೀಕ್ಷೆಗಳ ಅಂದಾಜು ಆಗಿದೆ.

ಕೇರಳದಲ್ಲಿ ಆಡಳಿತಾರೂಢ ಸಿಪಿಐ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಿತ್ರಕೂಟ ಹಾಗೂ ಬಿಜೆಪಿ ಮುಂದಾಳತ್ವದ ಎನ್‌ಡಿಎ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈ ಬಾರಿ, ಯುಡಿಎಫ್ ಸರ್ಕಾರ ಬರಬಹುದು ಎಂಬುದು ಮತಗಟ್ಟೆ ಸಮೀಕ್ಷಗಳ ಅಂದಾಜು ಆಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ: 

ದೇಶದ ಗಮನ ಸೆಳೆದಿರುವ, ಭಾರೀ ಜಿದ್ದಾಜಿದ್ದಿನ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಆಡಳಿತಾರೂಢ ಟಿಎಂಸಿ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವ ಕನಸು ನುಚ್ಚುನೂರಾಗಲಿದೆ ಎಂದು ಅಂದಾಜಿಸಲಾಗಿದೆ.

ಪೋಲ್​ ಆಫ್​ ಎಕ್ಸಿಟ್​ ಸಮೀಕ್ಷೆ


    ಬಿಜೆಪಿ- 143

    ಟಿಎಂಸಿ- 144

    ಕಾಂಗ್ರೆಸ್​- 5


ಪಿ ಮಾರ್ಕ್​ ಸಮೀಕ್ಷೆ


    ಬಿಜೆಪಿ- 150-175

    ಟಿಎಂಸಿ- 118-138

    ಕಾಂಗ್ರೆಸ್​- ಸಿಪಿಐ- 0


ಮ್ಯಾಟ್ರೀಜ್​ ಸಮೀಕ್ಷೆ


    ಬಿಜೆಪಿ- 146-161

    ಟಿಎಂಸಿ- 125-140

    ಕಾಂಗ್ರೆಸ್​- ಸಿಪಿಐ- 0


ಪೀಪಲ್ಸ್​​ ಪಲ್ಸ್​


    ಬಿಜೆಪಿ- 95-110

    ಟಿಎಂಸಿ- 178-189

    ಕಾಂಗ್ರೆಸ್​- 1-3

    ಸಿಪಿಐ-0-1


ಚಾಣಕ್ಯ ಸ್ಟ್ರಾಟರ್ಜಿ


    ಬಿಜೆಪಿ- 150-160

    ಟಿಎಂಸಿ- 130-140

    ಕಾಂಗ್ರೆಸ್​- ಸಿಪಿಐ- 0


ಪೋಲ್​ ಡೈರಿ


    ಬಿಜೆಪಿ- 142-171

    ಟಿಎಂಸಿ- 99-127

    ಕಾಂಗ್ರೆಸ್​- 3-5

    ಸಿಪಿಐ- 2-3