ಉಡುಪಿ: ವಾಟ್ಸಾಪ್‌ನಲ್ಲಿ ಬಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ 5 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ



ಉಡುಪಿ: ವಾಟ್ಸಾಪ್‌ನಲ್ಲಿ ಬಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡು ಆನ್‌ಲೈನ್ ವಂಚನೆ ಒಳಗಾಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿಯ ಹೆಜಮಾಡಿಯ ಅಬ್ದುಲ್ ಹಮೀದ್ ಎಂಬವರ ಪರಿಚಯದ ಕುಮಾರಸ್ವಾಮಿ ಎಂಬವರ ಮೊಬೈಲ್ ನಂಬ್ರದಿಂದ ಎಪಿಕೆ ಫೈಲ್ ವಾಟ್ಸಾಪ್‌ನಲ್ಲಿ ಬಂದಿದ್ದು ಅದನ್ನು ಡೌನ್ ಲೋಡ್ ಮಾಡಿದಾಗ ಅಬ್ದುಲ್ ಹಮೀದ್ ಅವರ ಬ್ಯಾಂಕ್ ಖಾತೆಯಿಂದ ಎ.13ರಂದು ಹಂತ ಹಂತವಾಗಿ ಒಟ್ಟು 4,86,13ರೂ. ಹಣ ಕಡಿತವಾಗಿರುವುದಾಗಿ ದೂರಲಾಗಿದೆ.