ಏಪ್ರಿಲ್ 12 : ಕಟಪಾಡಿ ಲೊಂಬಾರ್ಡ್ ಮಿಷನ್ ಹೆಲ್ತ್ ಸೆಂಟರ್ ನಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ



ಕಟಪಾಡಿ: ಮಿಷನ್‌ ಆಸ್ಪತ್ರೆಯ ವತಿಯಿಂದ ಕಟಪಾಡಿಯಲ್ಲಿ ಪ್ರಾರಂಭವಾದ ಲೊಂಬಾರ್ಡ್ ಮಿಷನ್ ಹೆಲ್ತ್ ಸೆಂಟರ್ ನಲ್ಲಿ ದಿನಾಂಕ 12.4.26 ಭಾನುವಾರದಂದು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಸಾಮಾನ್ಯ ಆರೋಗ್ಯ, ನೇತ್ರ, ಸ್ತ್ರೀರೋಗ, ಕಿವಿ ಮೂಗು ಗಂಟಲು, ಮಧುಮೇಹ, ಇ.ಸಿ.ಜಿ ತಪಾಸಣೆ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.