ಪರ್ಕಳ; ಚಲಿಸುತ್ತಿದ್ದ ರಿಕ್ಷಾಗೆ ಸಿಡಿಲಾಘಾತ- ಚಾಲಕ ಪಾರು , ಫ್ಯಾನ್ ಗೆ ಹಾನಿ



ಪರ್ಕಳ: ಶನಿವಾರ ರಾತ್ರಿ ವೇಳೆ ಬಂದ ಭಾರೀ ಗುಡುಗು ಸಹಿತ ಮಳೆ ಸಂದರ್ಭ ಚಲಿಸುತ್ತಿದ್ದ ರಿಕ್ಷಾಗೆ ಸಿಡಿಲು ಬಡಿದಿದ್ದು ಚಾಲಕ ಪಾರಾದ ಘಟನೆ ಸಂಭವಿಸಿದೆ. ಪರ್ಕಳದ ಆಟೋ ಚಾಲಕರಾದ ಮಹಮ್ಮದ್ ಅವರು ಪರ್ಕಳದ ಪರೀಕದಿಂದ  ಮಣಿಪಾಲದ ಕಡೆಗೆ ಬಾಡಿಗೆಗೆ ಸಂಚರಿಸುತ್ತಿರುವಾಗ ದಿಢೀರ್ ಸಿಡಿಲು ಎರಗಿದೆ.ಈ ಸಂದರ್ಭ ಅವರ ರಕ್ಷಾದಲ್ಲಿ ಅಳವಡಿಸಲಾಗಿದ್ದ ಫ್ಯಾನ್ ಗೆ ಸಿಡಿಲು ಬಡಿದು  ಸಂಪೂರ್ಣ ಹಾನಿಯಾಗಿದೆ.ಆದರೆ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಇದೇ ಸಂದರ್ಭ ಪರ್ಕಳದ ಮೆಸ್ಕಾಂ ಕಚೇರಿಯ ಇನ್ವರ್ಟರ್ ಸಿಸ್ಟಂಗೆ ಸಿಡಿಲರಿಗೆ ಹಾನಿಯಾಗಿ ನಷ್ಟ ಸಂಭವಿಸಿದ್ದಾಗಿ ಕರ್ತವ್ಯ ನಿರತ ಲೈನ್ ಮ್ಯಾನ್ ಗಳು ತಿಳಿಸಿದ್ದಾರೆ.