ಉಡುಪಿ: ಪತ್ರಕರ್ತರ ಸಂಘದ ಚುನಾವಣೆ - ರಾಜ್ಯ ಸಮಿತಿ ಸದಸ್ಯರಾಗಿ ಆಸ್ಟ್ರೋ ಮೋಹನ್ ಗೆ ಗೆಲುವು

ಆಸ್ಟ್ರೋ ಮೋಹನ್

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ನಡೆದ  ಚುನಾವಣೆಯಲ್ಲಿ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಗೆಲವು ಸಾಧಿಸಿದ್ದಾರೆ. ಇಂದು ಬೆಳಗ್ಗೆ 9 ರಿಂದ ಅಪರಾಹ್ನ 3 ಗಂಟೆಯವರೆಗೆ ಉಡುಪಿ ಪತ್ರಿಕಾ ಭವನದಲ್ಲಿ ಮತದಾನ ನಡೆದಿತ್ತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ , ಪ್ರಧಾನ ಕಾರ್ಯದರ್ಶಿ , ಕೋಶಾಧಿಕಾರಿ ಸಹಿತ ಬಹುತೇಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು , ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿತ್ತು.ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ  ಹಿರಿಯ ಪತ್ರಕರ್ತರಾದ ಆಸ್ಟ್ರೋ ಮೋಹನ್ , ರಾಜೇಶ್ ಶೆಟ್ಟಿ , ಬಾಲಕೃಷ್ಣ ಪೂಜಾರಿ ಚುನಾವಣೆಗೆ ನಿಂತಿದ್ದರು.ಇದೀಗ ಮತ ಎಣಿಕೆ ಪೂರ್ಣಗೊಂಡಿದ್ದು ಆಸ್ಟ್ರೋ ಮೋಹನ್ ಒಟ್ಟು 85  ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.ಒಟ್ಟು 161 ಮತದಾರರ ಪೈಕಿ 141 ಮತಗಳು ಚಲಾವಣೆಯಾಗಿದ್ದವು. ವಾರ್ತಾಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಯಾಗಿದ್ದರು.