ಮಲ್ಪೆ:ಆಳ ಸಮುದ್ರದಲ್ಲಿ ಕರಾವಳಿ ಕಾವಲು ಪೊಲೀಸರಿಂದ ಕಟ್ಟೆಚ್ಚರ - ದೆಹಲಿ ಕಾರ್ ಸ್ಪೋಟ ಬಳಿಕ ತಪಾಸಣೆ ಬಿಗಿ _

_

ಮಲ್ಪೆಯಲ್ಲಿ ಗಸ್ತು

ಮಲ್ಪೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.ಈ ಘಟನೆಯ ಬಳಿಕ ಇಡೀ ದೇಶದಲ್ಲಿ ಭದ್ರತಾ ಕ್ರಮ ಹೆಚ್ಚಿಸಲಾಗಿದೆ.ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಸರ್ವ ಋತು ಬಂದರು ಇದೆ.ಇಲ್ಲಿ ನೂರಾರು ಬೋಟ್ ಗಳು ನಿರಂತರ ಓಡಾಟ ನಡೆಸುವ ಕಾರಣ ಆಳ ಸಮುದ್ರದಲ್ಲಿ ಕರಾವಳಿ ಕಾವಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ನಿನ್ನೆ ರಾತ್ರಿಯಿಂಲೇ ಕರಾವಳಿ ಕಾವಲು ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಮುಖ್ಯವಾಗಿ ಆಳ ಸಮುದ್ರದಲ್ಲಿರುವ ಅಪರಿಚಿತ ಬೋಟ್ ಗಳ ಮೇಲೆ ನಿಗಾ ಇರಿಸಲಾಗಿದೆ.ತಮಿಳುನಾಡು, ಕೇರಳ ಬೋಟ್ ಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಶಸ್ತ್ರಸಜ್ಜಿತರಾಗಿ ಅಪರಿಚಿತ ಬೋಟ್ ಗಳ ಪರಿಶೀಲನೆ ಮಾಡುತ್ತಿರುವ ಕರಾವಳಿ ಕಾವಲು ಪೊಲೀಸರು ಪ್ರತಿಯೊಂದು ಬೋಟ್ ಗಳ ಮೇಲೆ ನಿಗಾ ಇರಿಸಿದ್ದಾರೆ.