
ನರೇಗಾ ಕಾಮಗಾರಿಯ ಸಾಮಾಗ್ರಿ ಮೊತ್ತ ಆದಷ್ಟು ಬೇಗ ಬಿಡುಗಡೆಗೊಳಿಸಿ-ಪವನ್ ಕುಮಾರ್ ಶಿರ್ವ ಒತ್ತಾಯ
09/10/2025 04:56 AM
ಉಡುಪಿ : ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ಗಳಲ್ಲೂ ಲಕ್ಷಾಂತರ ರೂಪಾಯಿಗಳು ಬಾಕಿ ಇವೆ.ಜನರು ಸರ್ಕಾರದ ಯೋಜನೆಗಳನ್ನು ಒಳ್ಳೆಯ ರೀತಿ ಪಡೆಯುತ್ತಾರೆ.ಜನರು ಆ ಕೆಲಸವನ್ನು ಸಾಲಗಳು ಮಾಡಿ ಕೆಲಸ ಸಂಪೂರ್ಣ ಮುಗಿದಿರುತ್ತದೆ.ಆದರೆ ಕೆಲಸ ಮುಗಿದ ನಂತರ ಮೊತ್ತ ಬರದೆ ಜನರು ಪರದಾಡುವಂತಾಗಿದೆ.ಸರ್ಕಾರದಿಂದ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ನರೇಗಾ ದಲ್ಲಿ ಕೆಲವಾರು ಯೋಜನೆ ಇದೆ.ಜನರು ಆ ಕೆಲಸ ಮಾಡಿದ ಮೇಲೆ ವರ್ಷಗಳು ಆದರೂ ಬಾಕಿ ಪಾವತಿಯಾಗುತ್ತಿಲ್ಲ.ಈ ಸಮಸ್ಯೆಯಿಂದ ಗ್ರಾಮದ ಅಭಿವೃದ್ಧಿಗೆ ಜನರು ಮುಂದೆ ಇಡುವ ಹೆಜ್ಜೆ ಹಿಂದೆ ಇಡುವಂತಾಗಿದೆ .ಆದ್ದರಿಂದ ಬಾಕಿ ಮೊತ್ತವನ್ನು ಆದಷ್ಟು ಬೇಗ ಬಿಡುಗಡೆಗೊಳಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಒತ್ತಾಯಿಸಿದ್ದಾರೆ.