
ಕುಂದಾಪುರ: ಗಿಫ್ಟ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ಮಹಿಳೆಗೆ 11.92 ಲಕ್ಷ ರೂ. ವಂಚನೆ
09/10/2025 05:13 AM
ಕುಂದಾಪುರ: ಸೈಬರ್ ವಂಚಕರು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ಮೂಲಕ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿಯ ಅಭಿನಯ(40) ಎಂಬವರು ಫೇಸ್‌ಬುಕ್‌ಗೆ ಡೆನಿಯಲ್ ಮೈಕಲ್ ಎಂಬ ಹೆಸರಿನ ವ್ಯಕ್ತಿ ಮೇ ತಿಂಗಳಲ್ಲಿ ಸಂದೇಶ ಕಳುಹಿಸಿ, ಒಂದು ಮೊಬೈಲ್ ಹಾಗೂ ಬ್ಯಾಗ್ ಮತ್ತು 50000 ಡಾಲರ್ ನೀಡುವುದಾಗಿ ತಿಳಿಸಿದ್ದನು. ಅದು ಇಂಡಿಯನ್ ಕರೆನ್ಸಿಯಲ್ಲಿ 56 ಲಕ್ಷ ರೂ. ಆಗುವುದಾಗಿ ಹೇಳಿ ಇದನ್ನು ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ಹೇಳಿದ್ದನು.
ಈ ಗಿಫ್ಟ್ ಮನೆಗೆ ಬರಬೇಕಾದರೆ ಹಣ ಹಾಕುವಂತೆ ಆತ ತಿಳಿಸಿದ್ದು, ಅದನ್ನು ನಂಬಿದ ಅಭಿನಯ, ವಿವಿಧ ಹಂತ ಗಳಲ್ಲಿ ಒಟ್ಟು 11,92,500ರೂ. ಹಣವನ್ನು ಹಾಕಿದ್ದರು. ಆದರೆ ಸೈಬರು ವಂಚಕರು ಗಿಫ್ಟ್ ನೀಡದೆ, ಹಣವನ್ನೂ ವಾಪಾಸ್ಸು ಮಾಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.