ಕೋಟ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ ಕಳ್ಳತನ- ಆರೋಪಿ ಬಂಧನ

ಕೋಟ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ ಕಳ್ಳತನ- ಆರೋಪಿ ಬಂಧನ

 


ಕೋಟ: ಕುಂದಾಪುರ ತಾಲೂಕಿನ ಗುಡ್ಡೆ ಅಂಗಡಿಯ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ(26), ಬಂಧಿತ ಆರೋಪಿ.

ಈ ಬಗ್ಗೆ  ಬಸವ ಪೂಜಾರಿ(72) ಎಂಬವರು ನೀಡಿದ ದೂರಿನಂತೆ  ಕೋಟ ಪೋಲಿಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 176/2025 ಕಲಂ 331(4), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದೆ. 

ಸುಮಾರು  18 ಗ್ರಾಂ ತೂಕದ  ಅಂದಾಜು 1,45,000 ರೂ. ಮೌಲ್ಯದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿತ್ತು. ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ ಕುಮಾರ್ ಆರ್ ನೇತೃತ್ವದಲ್ಲಿ ಕಳ್ಳನನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article