ಉಡುಪಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬಿಟ್ಟು ಹೋದಲ್ಲಿ ಸಹಾಯವಾಣಿಗೆ ಕರೆ ಮಾಡಿ

ಉಡುಪಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬಿಟ್ಟು ಹೋದಲ್ಲಿ ಸಹಾಯವಾಣಿಗೆ ಕರೆ ಮಾಡಿ

 

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22 ರಂದು ಪ್ರಾರಂಭಿಸಿದ್ದು ಸಮೀಕ್ಷೆ ಕಾರ್ಯವು ಪೂರ್ಣಗೊಳ್ಳದ ಕಾರಣ ಸರ್ಕಾರದ ಆದೇಶದಂತೆ ಅ.18 ರವರೆಗೆ ಸಮೀಕ್ಷೆ ಕಾರ್ಯವನ್ನು ಮುಂದೂಡಲಾಗಿದೆ. ಈ ಸಮೀಕ್ಷೆ ಸಮಯದಲ್ಲಿ ಸಮೀಕ್ಷೆದಾರರು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡದೆ ಬಿಟ್ಟು ಹೋದಲ್ಲಿ ರಾಜ್ಯ ಮಟ್ಟದ ಸಹಾಯವಾಣಿ 8050770004, ಜಿಲ್ಲಾ ಮಟ್ಟದ ಸಹಾಯವಾಣಿ 0820-2574881, ಉಡುಪಿ/ಬ್ರಹ್ಮಾವರ/ ಕಾಪು ಮಟ್ಟದ ಸಹಾಯವಾಣಿ 0820-2520739,  ಬೈಂದೂರು/ಕುಂದಾಪುರ 9972294198, ಕಾರ್ಕಳ-ಹೆಬ್ರಿ 08258-298610 ಸಹಾಯವಾಣಿಗೆ ಕಚೇರಿ ಅವಧಿಯಲ್ಲಿ ಕರೆ ಮಾಡಿದಲ್ಲಿ ಸಮೀಕ್ಷೆದಾರರನ್ನು ಮನೆಗೆ ಕಳುಹಿಸಿ ಸಮೀಕ್ಷೆ ಕಾರ್ಯ ನಡೆಸಲಾಗುವುದು. ಕುಟುಂಬದ ಸದಸ್ಯರು ತಮ್ಮ ಮೊಬೈಲ್/ಲ್ಯಾಪ್ ಟಾಪ್ ನಲ್ಲಿ https://kscbcseldeclaration.karnataka.gov.in ಲಿಂಕ್ ಮೂಲಕ ಸ್ವಯಂ ನೋಂದಣಿಯನ್ನು ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article