
ಬೊಮ್ಮರಬೆಟ್ಟುವಿನ ರಾಜೇಂದ್ರ ಪ್ರಸಾದ್ ಈಗ ಚಂಡೀಗಢದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ
08/10/2025 02:46 PM
ಉಡುಪಿ: ಉಡುಪಿ ಮೂಲದ ಐಎಎಸ್ ಅಧಿಕಾರಿಯೊಬ್ಬರು ಚಂಡೀಗಢದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿ ಹಿರಿಯಡ್ಕ ಬೊಮ್ಮರಬೆಟ್ಟು ಎಂಬಲ್ಲಿ ಹುಟ್ಟಿದ ರಾಜೇಂದ್ರ ಪ್ರಸಾದ್ ಅಧಿಕಾರಿಯಾಗಿ ಅನೇಕ ಹುದ್ದೆಗಳನ್ನು ಈ ಹಿಂದೆ ಅಲಂಕರಿಸಿದ್ದರು. ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಅಭಿವೃದ್ಧಿ ಇಲಾಖಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಇವರಿಗೆ ಇದೀಗ ಮುಂಬಡ್ತಿ ನೀಡಿ ಚಂಡೀಗಡ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಿದೆ. ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ರಾಜೇಶ್ ಪ್ರಸಾದ್, ಹಿರಿಯಡ್ಕ ಮತ್ತು ಬೊಮ್ಮರಬೆಟ್ಟು ಪರಿಸರದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಪೂರೈಸಿ ನಂತರ ಉಡುಪಿ ಕೇಂದ್ರ ಸ್ಥಾನದಲ್ಲಿರುವ ಎಂಜಿಎಂ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪದವಿ ಪಡೆದಿದ್ದರು. ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಇವರ ಸಾಧನೆಯ ಬಗ್ಗೆ ಉಡುಪಿ ಜಿಲ್ಲೆಯ ಜನ ಹೆಮ್ಮೆ ವ್ಯಕ್ತಪಡಿಸಿದ್ದಾರೆ.