ಬಿಹಾರ: ಮತಪಟ್ಟಿಯಿಂದ ಕೈಬಿಟ್ಟ 3.66 ಲಕ್ಷ ಮಂದಿಯ ಡೇಟಾ ಕೊಡಿ: ಆಯೋಗಕ್ಕೆ ಸುಪ್ರೀಂ ಸೂಚನೆ

ಬಿಹಾರ: ಮತಪಟ್ಟಿಯಿಂದ ಕೈಬಿಟ್ಟ 3.66 ಲಕ್ಷ ಮಂದಿಯ ಡೇಟಾ ಕೊಡಿ: ಆಯೋಗಕ್ಕೆ ಸುಪ್ರೀಂ ಸೂಚನೆ

 


ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯಡಿ (ಎಸ್‌ಐಆರ್) ಅಂತಿಮ ಮತದಾರರ ಪಟ್ಟಿಯಿಂದ ಕೈಬಿಟ್ಟ 3.66 ಲಕ್ಷ ಮಂದಿಯ ಮಾಹಿತಿಯನ್ನು ಅ.9ರೊಳಗೆ ನೀಡ ಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಚು. ಆಯೋಗಕ್ಕೆ ಕೇಳಿದೆ. ಬಿಹಾರ ಚುನಾವಣೆ ಘೋಷಣೆಯಾದ ಒಂದು ದಿನದ ಬಳಿಕ ಈ ಆದೇಶ ಹೊರಬಂದಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ ಹಾಗೂ ಜಾಯಮಾಲ್ಯ ಬಾಗಿ ಅವರಿದ್ದ ಪೀಠ, ಕರಡು ಪಟ್ಟಿಯನ್ನು ಸಿದ್ಧಪಡಿಸಿದಾಗ ಪಟ್ಟಿಯಿಂದ 65 ಲಕ್ಷ ಮಂದಿಯನ್ನು ಕೈಬಿಡಲಾಗಿದೆ ಎಂದು ಹೇಳಿದ್ದೀರಿ. ಈಗ ಅಂತಿಮ ಪಟ್ಟಿಯಲ್ಲಿ ಕೆಲವು ಹೆಸರುಗಳನ್ನು ಸೇರಿಸಿದ್ದೀರಿ. ಈ ರೀತಿ ಸೇರಿಸಿದ ಹೆಸರುಗಳು ಕೈಬಿಟ್ಟ ಹೆಸರುಗಳೇ ಇಲ್ಲ ಹೊಸವೇ ಎಂದು ಪ್ರಶ್ನಿಸಿದೆ.

Ads on article

Advertise in articles 1

advertising articles 2

Advertise under the article