![]() |
| ಪುತ್ತಿಗೆ ಶ್ರೀಗಳಿಂದ ಯಮದ್ವೀಪ ಪ್ರಜ್ವಲನೆ |
ಉಡುಪಿ: ದೀಪಾವಳಿ ಪೂರ್ವಭಾವಿಯಾಗಿ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಪಾದರು ಯಮದೀಪ ಪ್ರಜ್ವಲನೆ ಮಾಡಿದರು. ದೀಪಾವಳಿ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣ ಆವರಣದಲ್ಲಿ ವಿಶೇಷ ಸಾಮೂಹಿಕ ಗೋಪೂಜೆ ಸೇವೆ ಮಾಡಲು ಭಕ್ತರಿಗೆ ಅ.22ರ ಬೆಳಗ್ಗೆ 9ರಿಂದ 12ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಖುದ್ದಾಗಿ ಹಾಜರಾಗಿ ಸೇವೆ ಸಲ್ಲಿಸುವವರಿಗೆ ಸಂಕಲ್ಪಪೂರ್ವಕ ಗೋಪೂಜೆ ನಡೆಸಲಾಗುವುದು. ಆನ್ಲೈನ್ ಮೂಲಕ ಸೇವೆ ಸಲ್ಲಿಸಿದವರಿಗೆ ಅನುಗ್ರಹ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ.ಹೆಚ್ಚಿನ ಮಾಹಿತಿಗೆ ಭಾರತಿ ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಲು ಶ್ರೀ ಮಠದ ಪ್ರಕಟನೆ ತಿಳಿಸಿದೆ.
