ಮಂಗಳೂರು: ಪಟಾಕಿ ಅಂಗಡಿಯಲ್ಲಿ ಸುಲಿಗೆ- ಫಾಝಿಲ್ ಕೊಲೆ ಆರೋಪಿ ಸಹಿತ ಇಬ್ಬರ ಮೇಲೆ ಎಫ್ ಐ ಆರ್

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ


ಮಂಗಳೂರು: ನಗರದ ಬಜ್ಜೆಯಲ್ಲಿನ ಪಟಾಕಿ ಅಂಗಡಿಗಳಿಗೆ ನುಗ್ಗಿ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ್ದ ಇಬ್ಬರ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಮಂಗಳಪೇಟೆ ಫಾಝಿಲ್ ಕೊಲೆ ಆರೋಪಿ ರೌಡಿ ಶೀಟ‌ರ್ ಪ್ರಶಾಂತ್ ಯಾನೆ ಪಚ್ಚು ಮತ್ತು ಅಶ್ವಿತ್‌ ಆರೋಪಿಗಳು.

ಅಕ್ಟೋಬರ್ 22ರಂದು ಬಜ್ಪೆಯ ಪಟಾಕಿ ಮಾರಾಟ ಮಳಿಗೆಗೆ ನುಗ್ಗಿದ ಆರೋಪಿಗಳು ಅದರ ಮಾಲಕ ದಾಮೋದರ ಎಂಬವರಿಗೆ ಬೆದರಿಕೆ ಹಾಕಿ ಹಣ ಸುಲಿಗೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ದಾಮೋದರ್ ಅವರು ಆರೋಪಿಗಳಿಗೆ ಹೆದರಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರು. ಬಳಿಕ ಧೈರ್ಯ ಮಾಡಿ ಅಕ್ಟೋಬ‌ರ್ 23ರಂದು ಈ ಬಗ್ಗೆ ಬಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.