![]() |
| ಬಿಲ್ಲವ ವೈಭವ- ದುಬೈ |
ದುಬೈ ಮಿಲೆನಿಯಮ್ ಹೋಟೆಲ್ ನಲ್ಲಿ ಬಿಲ್ಲವ ವೈಭವ ಕಾರ್ಯಕ್ರಮ ಸಂಪನ್ನಗೊಂಡಿತು.ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬಾ ಸಂತೋಷವಾಯಿತು.ಈ ದಿನ ನನ್ನ ಜೀವನದ ಮರೆಯಲಾಗದ ದಿನ. ದುಬೈ ಬಿಲ್ಲವ ಫ್ಯಾಮಿಲಿಯವರ ಪ್ರೀತಿಗೆ ನಾನು ತಲೆ ಬಾಗಿ ನಮಿಸುತ್ತೇನೆ.ಇಡೀ ದಿನ ದ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು. ಎಷ್ಟೋ ದಿನದ ಪರಿಶ್ರಮ ನಿಮ್ಮದು. ಅಧ್ಯಕ್ಷರಾದ ಸಹೋದರ ದೀಪಕ್ ಹಾಗೂ ಜ್ಯೋತಿ, ನನ್ನ ಪ್ರೀತಿಯ ಸಹೋದರ ಸತೀಶ್ ಅಣ್ಣಾ ಹಾಗೂ ಸುವರ್ಣ ಅಕ್ಕ, ಜಿತೇಂದ್ರ ಅಣ್ಣಾ, ಹಾಗೂ ಎಲ್ಲಾ ಪದಾಧಿಕಾರಿಗಳು ನನ್ನನ್ನು ಪ್ರೀತಿಯಿಂದ ಕರೆದು ಗೌರವಿಸಿದಿರಿ. ದೂರದ ಬೆಟ್ಟ ಸುಂದರ. ನೀವು ಇಲ್ಲಿ ಪಡುವ ಶ್ರಮ, ಅದಕ್ಕೆ ತಕ್ಕ ಪ್ರತಿಫಲ ದೇವರು ನಿಮಗೆ ಕೊಡಲಿ. ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವ ನಿಮಗೆ ತುಳುನಾಡಿನ ದೈವ ದೇವರ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೀತಾಂಜಲಿ ಸುವರ್ಣ ತಿಳಿಸಿದ್ದಾರೆ.
