ಕುಂದಾಪುರ: ಧರ್ಮ ಸಂರಕ್ಷಣೆ ಯಾತ್ರೆಗೆ ಕರೆಯೋಲೆ ಕೊಡಲು ಮನೆಗೆ ಬಂದ ಯುವತಿಗೆ ಮುತ್ತುಕೊಟ್ಟ!  ನವೀನಚಂದ್ರ ಶೆಟ್ಟಿ ರಟ್ಟಾಡಿ ವಿರುದ್ದ ದೂರು

ಕುಂದಾಪುರ: ಧರ್ಮ ಸಂರಕ್ಷಣೆ ಯಾತ್ರೆಗೆ ಕರೆಯೋಲೆ ಕೊಡಲು ಮನೆಗೆ ಬಂದ ಯುವತಿಗೆ ಮುತ್ತುಕೊಟ್ಟ! ನವೀನಚಂದ್ರ ಶೆಟ್ಟಿ ರಟ್ಟಾಡಿ ವಿರುದ್ದ ದೂರು

 

ಕುಂದಾಪುರ: ತಾಲೂಕಿನ ಅಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಮುತ್ತು ಕೊಟ್ಟ ಬಗ್ಗೆ  ಪ್ರಕರಣ ದಾಖಲಾಗಿದೆ. 

ದೂರುದಾರೆ ಧರ್ಮಸ್ಥಳದ ಧರ್ಮ ಸಂರಕ್ಷಣಾಯಾತ್ರೆಯ ಸಭೆಯ ಬಗ್ಗೆ ರಟ್ಟಾಡಿ ಶ್ರೀ ರಟ್ಟೆಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮುಖ್ಯಸ್ಥ , ನವೀನಚಂದ್ರ ಶೆಟ್ಟಿ ರಟ್ಟಾಡಿಗೆ ಕಾರ್ಯಕ್ರಮ ಆಹ್ವಾನ ಪತ್ರಿಕೆ ಕೊಡಲು ತೆರಳಿದ್ದರು. ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿಯ ಮನೆಗೆ ಬರುವಂತೆ ಕರೆದ ಆರೋಪಿ ಆಹ್ವಾನ ಪತ್ರಿಕೆ ಪಡೆಯುವಾಗ ಯುವತಿಯ ಕೈಯನ್ನು ಸ್ವರ್ಶಿಸಿದ್ದಾನೆ.ಇದರಿಂದ ಯುವತಿಗೆ ಮುಜುಗರ ಉಂಟಾಗಿದ್ದು ನಂತರ ಆಕೆ ಹೊರಡಲು ಅನುವಾದಾಗ  ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿದ ಆರೋಪಿ ಹತ್ತಿರಕ್ಕೆ ಎಳೆದುಕೊಂಡು ಬಲ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ.ಗಾಬರಿಗೊಂಡ ಯುವತಿ ಅಲ್ಲಿಂದ ತಕ್ಷಣ ಎದ್ದು ಹೊರಟರೂ ಮನೆಗೆ ಬರುವಂತೆ ಹೇಳುತ್ತಾ ಮನೆಯ ಬಾಗಿಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಅ.ಕ್ರ .ನಂ.  29-2025 ಕಲಂ 75 ಬಿ. ಎನ್. ಎಸ್ ನಂತೆ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article