
ಉಡುಪಿ: ದೊಡ್ಡಣಗುಡ್ಡೆ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ
ಉಡುಪಿ: ದೊಡ್ಡಣಗುಡ್ಡೆ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ಕಳೆದ ಕೆಲವು ದಿನಗಳಿಂದ ಈದ್ ಮಿಲಾದ್ ಪ್ರಯುಕ್ತ ನಡೆಯುತ್ತಿದ್ದ ಈದ್ ಮಿಲಾದ್ ಮದರಸಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ( ಭಾಷಣ- ಹಾಡು - ಬುರ್ದಾ- ಖವಾಲಿ) ಸ್ಪರ್ಧೆಗಳ ಸಮಾರೋಪ ಸಮಾರಂಭ ಶುಕ್ರವಾರ ರಾತ್ರಿ ಸಮಾಪನಗೊಂಡಿತು.ಕಳೆದ ಮೂರು ದಿನಗಳ ಕಾಲ ಪೈಗಂಬರ್ ಜನ್ಮ ದಿನದ ಅಂಗವಾಗಿ ಮದರಸಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಷಣ- ಹಾಡು - ಬುರ್ದಾ- ಖವಾಲಿ ಮೂಲಕ ಈದ್ ಮಿಲಾದ್ ಹಬ್ಬಕ್ಕೆ ವಿಶೇಷ ಮೆರುಗು ನೀಡಿದರು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ನಗದು ಪುರಸ್ಕಾರ ವಿತರಣೆ ನಡೆಯಿತು.ಈದ್ ಅಂಗವಾಗಿ ಶನಿವಾರ ಧ್ವಜಾರೋಹಣ ,ಮಖಾಂ ಝಿಯಾರತ್ ,ಸಂದಲ್ ಮೆರವಣಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಮಸೀದಿ ಕಮಿಟಿಯ ಅಧ್ಯಕ್ಷ ಕೆ ಎಸ್ ಎಂ. ಅಬ್ದುಲ್ ಖಾದರ್ ಹಾಜಿ ,ಉಪಾಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿ ಮೊಹಮ್ಮದ್ ಕಾಸಿಂ, ಖಜಾಂಚಿ ಎಸ್ ಎಸ್ ಮುಹ್ಯ್ ದ್ದೀನ್ ,ಮಸೀದಿ ಖತೀಬರಾದ ಖಾಸಿಂ ಸಅದಿ, ಅಬ್ದುಲ್ ರಹ್ಮಾನ್ ಸಅದಿ, ಇಬ್ರಾಹಿಂ ಫುರ್ಖಾನಿ, ಉಮರಲ್ ಫಾರೂಕ್ ಹನೀಫಿ, ಮುಖಂಡರಾದ ರಫೀಕ್ , ಜುನೈದ್ , ಮುನೀರ್ ,ಬುಲೆಟ್ ಸೈಫ್ ,ಆಸಿಫ್ ಮೈತ್ರಿ ಮತ್ತಿತರರು ಉಪಸ್ಥಿತರಿದ್ದರು.