
ಕಾರ್ಕಳ: ಆನ್ಲೈನ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರೋಪಿ ಬಂಧನ
19/09/2025 02:25 PM
ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಗ್ರಾಮದಲ್ಲಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಜೀರ್ (45) ಬಂಧಿತ ಆರೋಪಿ.
ಆರೋಪಿ ವೆಬ್ ಸೈಟ್ ಲಿಂಕ್ ಮತ್ತು App ಬಳಸಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿದ್ದು ಇತರರಿಗೂ ಆಡಲು ಪ್ರಚೋದನೆ ನೀಡುತ್ತಿದ್ದ. ಆರೋಪಿಯನ್ನು ವಶಕ್ಕೆ ಪಡೆದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 107/2025 U/S 78(i)(iii) KP Act ಮತ್ತು ಕಲಂ 112(1) BNS ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಬಳಿ ಇದ್ದ 30,000 ರೂ.ನಗದು ವಶಪಡಿಸಿಕೊಳ್ಳಲಾಗಿದೆ.